ನಳೀನ್ ಕುಮಾರ್ ಕಟೀಲ್ ಗೆ ಪ್ರೌಢಿಮೆ ಇಲ್ಲ: ಸಿದ್ದರಾಮಯ್ಯ

Prasthutha|

ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಒಬ್ಬ ವಿದೂಷಕ ಇದ್ದ ಹಾಗೆ, ಅವರಿಗೆ ಪ್ರೌಢಿಮೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

- Advertisement -

ಪಿಎಫ್ಐ ಬೆಳೆಸಿದ್ದೇ ಸಿದ್ದರಾಮಯ್ಯ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಪ, ಕಟೀಲ್ ಗೆ ಪ್ರೌಢಿಮೆ ಇಲ್ಲ. ನಾವು ಅಧಿಕಾರದಲ್ಲಿದ್ದಾಗ ಇವರು ವಿಪಕ್ಷ ದಲ್ಲಿ ಇದ್ದರೂ ಆಗ ಯಾಕೆ ಪ್ರಸ್ತಾಪ ಮಾಡಲಿಲ್ಲ. ಇವರ ಬಾಯಲ್ಲೇನು ಕಡಬು ಸಿಕ್ಕಿ ಹಾಕಿಕೊಂಡಿತ್ತಾ ಎಂದು ಪ್ರಶ್ನಿಸಿದರು. 

ಭ್ರಷ್ಟಾಚಾರದ ಬಗ್ಗೆ ಅಧಿವೇಶನದಲ್ಲೇ ಸಿಎಂಗೆ ನ್ಯಾಯಾಂಗ ತನಿಖೆ ಮಾಡಿಸಿ ಎಂದು ಹೇಳಿದೆ, ಅದಕ್ಕೆ ಅವರು ಉತ್ತರ ನೀಡಲಿಲ್ಲ. ಅದನ್ನೆಲ್ಲಾ ಬಿಟ್ಟು ಈಗ ಜಾತಿಗೆ ನಿಂತಿದ್ದಾರೆ. ಕಾಂಗ್ರೆಸ್ಸಿನವರು ಲಿಂಗಾಯಿತ ಮುಖ್ಯಮಂತ್ರಿಗಳನ್ನೇ ಟಾರ್ಗೆಟ್ ಮಾಡುತ್ತದೆ ಎಂದು ಹುಯಿಲೆಬ್ಬಿಸುತ್ತಿದ್ದಾರೆ. ಜಾತಿಗೂ ಭ್ರಷ್ಟಾಚಾರಕ್ಕೂ ಏನು ಸಂಬಂಧ ಇದೆ. ಬೊಮ್ಮಾಯಿ ಈಸ್ ಹೆಡ್ ಆಫ್ ದಿ ಗವರ್ನಮೆಂಟ್. ಅದಕ್ಕಾಗಿ ಅವರನ್ನೇ ನಾವು ಪ್ರಶ್ನಿಸುತ್ತಿದ್ದೇವೆ ಎಂದು ಹೇಳಿದರು.



Join Whatsapp