ಪ್ರೊ ಕಬಡ್ಡಿ ಲೀಗ್ ಟೂರ್ನಿಯ 9ನೇ ಆವೃತ್ತಿ; ಜೈಪುರ ಪಿಂಕ್ ಪ್ಯಾಂಥರ್ಸ್ ಚಾಂಪಿಯನ್‌

Prasthutha|

ಪುಣೇರಿ ಪಲ್ಟಾನ್ ತಂಡವನ್ನು ರೋಚಕ 4 ಅಂಕಗಳ ಅಂತರದಲ್ಲಿ ಮಣಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್, ಪ್ರೊ ಕಬಡ್ಡಿ ಲೀಗ್ ಟೂರ್ನಿಯ 9ನೇ ಆವೃತ್ತಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. . ಮುಂಬೈನ ಸರ್ದಾರ್ ವಲ್ಲಭಭಾಯಿ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಸುನಿಲ್ ಕುಮಾರ್ ಸಾರಥ್ಯದ ಜೈಪುರ ಪಿಂಕ್ ಪ್ಯಾಂಥರ್ಸ್, ಪುಣೇರಿ ಪಲ್ಟಾನ್ ವಿರುದ್ಧ 33-29 ಅಂಕಗಳಿಂದ ಜಯ ಸಾಧಿಸಿತು.

- Advertisement -

2014ರಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್‌ ಪಟ್ಟವನ್ನ ಅಲಂಕರಿಸಿದ್ದ ಪಿಂಕ್ ಪ್ಯಾಂಥರ್ಸ್, ಇದೀಗ 9ನೇ ಆವೃತ್ತಿಯಲ್ಲೂ ಚಾಂಪಿಯನ್‌ ಆಗುವ ಮೂಲಕ ಎರಡನೇ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ವಿಜೇತ ತಂಡ ಮೂರು ಕೋಟಿ ರೂಪಾಯಿ ಮತ್ತು ರನ್ನರ್‌ ಅಪ್‌ ತಂಡ ಒಂದು ಕೋಟಿ 80 ಲಕ್ಷ ರೂಪಾಯಿ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.

ವಿ.ಅಜಿತ್, ಸುನಿಲ್ ಕುಮಾರ್ ಹಾಗೂ ಅರ್ಜುನ್ ದೇಶ್ವಾಲ್ ತಲಾ 6 ಅಂಕಗಳಿಸುವ ಮೂಲಕ ಜೈಪುರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಧ್ಯತಂರ ವಿರಾಮದ ವೇಳೆಗೆ ಪ್ಯಾಂಥರ್ಸ್ 14-12 ಅಂತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 22 ನೇ ನಿಮಿಷದಲ್ಲಿ ಪುಣೇರಿ ಪಲ್ಟಾನ್  ತಂಡವನ್ನು ಆಲೌಟ್‌ ಮಾಡುವ ಮೂಲಕ 18-13 ರಲ್ಲಿ ಮಹತ್ವದ ಮುನ್ನಡೆ ಸಾಧಿಸಿತ್ತು.

- Advertisement -

ವೈಯಕ್ತಿಕ ಪ್ರಶಸ್ತಿಗಳ ವಿವರ

ಅತ್ಯಂತ ಮೌಲ್ಯಯುತ ಆಟಗಾರ; ಅರ್ಜುನ್ ದೇಸ್ವಾಲ್,  ₹20 ಲಕ್ಷ ನಗದು ಬಹುಮಾನ, ತಂಡ; ಜೈಪುರ ಪಿಂಕ್ ಪ್ಯಾಂಥರ್ಸ್

ಅತ್ಯುತ್ತಮ ರೈಡರ್‌; ಭರತ್‌, ₹15 ಲಕ್ಷ ನಗದು ಬಹುಮಾನ, ತಂಡ; ಬೆಂಗಳೂರು ಬುಲ್ಸ್‌

ಅತ್ಯುತ್ತಮ ಡಿಫೆಂಡರ್;‌ ಅಂಕುಶ್‌, ₹15 ಲಕ್ಷ ನಗದು ಬಹುಮಾನ, ತಂಡ; ಜೈಪುರ ಪಿಂಕ್ ಪ್ಯಾಂಥರ್ಸ್

9ನೇ ಆವೃತ್ತಿಯ ಯುವ ಆಟಗಾರ; ನರೇಂದರ್‌, ₹8 ಲಕ್ಷ ನಗದು ಬಹುಮಾನ, ತಂಡ; ತಮಿಳು ತಲೈವಾಸ್

ಫೈನಲ್‌ ಪಂದ್ಯದ ಪರಿಪೂರ್ಣ ಆಟಗಾರ;  ಸುನಿಲ್ ಕುಮಾರ್, ₹50 ಸಾವಿರ ನಗದು ಬಹುಮಾನ, ತಂಡ; ಜೈಪುರ ಪಿಂಕ್ ಪ್ಯಾಂಥರ್ಸ್

ಫೈನಲ್‌ ಪಂದ್ಯದ ʻಗೇಮ್‌ ಚೇಂಜರ್ʼ; ವಿ ಅಜಿತ್ ಕುಮಾರ್, ₹50 ಸಾವಿರ ನಗದು ಬಹುಮಾನ, ತಂಡ; ಜೈಪುರ ಪಿಂಕ್ ಪ್ಯಾಂಥರ್ಸ್

Join Whatsapp