ಕಾರ್ಮಿಕರ ಸುರಂಗವಾಸಕ್ಕೆ 9ನೇ ದಿನ: 6 ಇಂಚ್ ಪೈಪ್‌ ಮೂಲಕ ಆಹಾರ, ಆಮ್ಲಜನಕ ಪೂರೈಕೆ

Prasthutha|

ಉತ್ತರಾಖಂಡ: ನಿರ್ಮಾಣ ಹಂತದ ಸುರಂಗ ಕುಸಿದು ಒಳಗೆ ಸಿಲುಕಿರುವ ಕಾರ್ಮಿಕರಿಗೆ ನಿನ್ನೆಯಿಂದ 6 ಇಂಚಿನ ಪೈಪ್ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಆಹಾರ, ಆಮ್ಲಜನಕ ಪೂರೈಕೆ ಮಾಡಲಾಗಿದೆ. 9 ದಿನಗಳಿಂದ ಸುರಂಗದ ಒಳಗೆ ಸಿಲುಕಿರುವ 41 ಕಾರ್ಮಿಕರ ದೃಶ್ಯಗಳನ್ನು ಪಡೆಯುವುದಕ್ಕೂ ಸಾಧ್ಯವಾಗಲಿದೆ. ಇದು ಒಂದು ಹಂತದ ಯಶಸ್ಸು. ಮುಂದೆ ಕಾರ್ಮಿಕರನ್ನು ಹೊರ ತರೋದರಲ್ಲಿ ಯಶಸ್ಸಾಗುತ್ತೇವೆ ಎಂದು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ಅಂಶು ಮನೀಶ್ ಖಲ್ಖೋ ತಿಳಿಸಿದ್ದಾರೆ.

- Advertisement -

ನಾವು 53 ಮೀಟರ್ ಪೈಪ್ ನ್ನು ಅವಶೇಷಗಳ ಇನ್ನೊಂದು ಬದಿಗೆ ಕಳುಹಿಸಿದ್ದೇವೆ ಮತ್ತು ಸಿಲುಕಿರುವ ಕಾರ್ಮಿಕರು ನಮ್ಮ ಧ್ವನಿ ಕೇಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ದ ಡ್ರೋನ್‌ಗಳು ಮತ್ತು ರೋಬೋಟ್‌ಗಳನ್ನು ಸಹ ಸ್ಥಳಕ್ಕೆ ತರಲಾಗಿದ್ದು, ಸಿಲುಕಿರುವ ವ್ಯಕ್ತಿಗಳು ಅಲ್ಲಿಂದ ಹೊರಬರುವುದಕ್ಕೆ ಬೇರೆ ಮಾರ್ಗಗಳ ಸಾಧ್ಯತೆಯನ್ನು ಪರಿಶೀಲಿಸಲಾಗಿದೆ ಎಂದಿದ್ದಾರೆ.

ಇದಕ್ಕೂ ಮೊದಲು ಸುರಂಗದ ಮೇಲ್ಭಾಗದಲ್ಲಿದ್ದ 4 ಇಂಚಿನ ಟ್ಯೂಬ್ ಮೂಲಕ ಆಮ್ಲಜನಕ ಹಾಗೂ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿತ್ತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ದ ಡ್ರೋನ್‌ಗಳು ಮತ್ತು ರೋಬೋಟ್‌ಗಳನ್ನು ಸಹ ಸ್ಥಳಕ್ಕೆ ತರಲಾಗಿದ್ದು, ಸಿಲುಕಿರುವ ವ್ಯಕ್ತಿಗಳು ಅಲ್ಲಿಂದ ಹೊರಬರುವುದಕ್ಕೆ ಬೇರೆ ಮಾರ್ಗಗಳ ಸಾಧ್ಯತೆಯನ್ನು ಪರಿಶೀಲಿಸಲಾಗಿದೆ. ಪ್ರಧಾನಿ ಅವರು ಕೂಡ ದೂರವಾಣಿ ಮೂಲಕ ಕಾರ್ಯಾಚರಣೆ ಕುರಿತು ವಿಚಾರಣೆ ನಡೆಸಿದ್ದಾರೆ.



Join Whatsapp