ನವದೆಹಲಿ: ಭಾರತದಲ್ಲಿ ಶೇಕಡಾ 99 ರಷ್ಟು ಮುಸ್ಲಿಮರು ತಮ್ಮ ಪೂರ್ವಜರು, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಮಾತೃಭೂಮಿಯಿಂದ ‘ಹಿಂದೂಸ್ತಾನಿ’ಗಳೇ ಆಗಿದ್ದಾರೆ ಎಂದು ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ಪೂರ್ವಜರನ್ನು ಪರಿಗಣಿಸಿದರೆ ಎಲ್ಲ ಭಾರತೀಯರ ಡಿಎನ್ ಎ ಒಂದೇ ಆಗಿದೆ ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ರ ಅಭಿಪ್ರಾಯವನ್ನು ಅವರು ಇದೇ ಸಂದರ್ಭದಲ್ಲಿ ಸಮರ್ಥಿಸಿಕೊಂಡರು.
ಥಾಣೆ ಜಿಲ್ಲೆಯ ಉತ್ತನ್ ನಲ್ಲಿರುವ ರಾಮಭಾವು ಮಲ್ಗಿ ಪ್ರಬೋಧಿನಿಯಲ್ಲಿ ಆರೆಸ್ಸೆಸ್ ನ ಮುಸ್ಲಿಂ ಘಟಕವಾದ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್ ಎಂ) ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪವಿತ್ರ ಗ್ರಂಥ ಕುರ್ ಆನ್ ನ ನಿರ್ದೇಶನಗಳು ಮತ್ತು ತತ್ವಗಳ ಪ್ರಕಾರ ನಮ್ಮ ರಾಷ್ಟ್ರದ ಕಡೆಗೆ ನಮ್ಮ ಕರ್ತವ್ಯವನ್ನು ನಾವು ಸರ್ವೋಚ್ಚ ಮತ್ತು ಇತರ ಎಲ್ಲಾ ವಿಷಯಗಳಿಗಿಂತ ಹೆಚ್ಚಾಗಿ ಪರಿಗಣಿಸಬೇಕು ಎಂದು ಇದ್ರೇಶ್ ಕುಮಾರ್ ಅವರು ಹೇಳಿರುವುದಾಗಿ ಎಂಆರ್ ಎಂ ಹೇಳಿಕೆ ಬಿಡುಗಡೆ ಮಾಡಿದೆ.
ಇಂದ್ರೇಶ್ ಕುಮಾರ್ ಅವರು ಸಮಾನ ಡಿಎನ್ಎ ಕುರಿತ ಭಾಗವತ್ ಅವರ ಹೇಳಿಕೆ ಉಲ್ಲೇಖಿಸಿ ಇದರಲ್ಲಿ ‘ಡಿ’ ಎಂಬುದು ಕನಸು (ಡ್ರೀಮ್ಸ್), ‘ಎನ್’ –ರಾಷ್ಟ್ರ (ನೇಷನ್) ‘ಎ‘ –ಪೂರ್ವಜರನ್ನು (ಆನ್ಸೆಸ್ಟರ್ಸ್) ಬಿಂಬಿಸಲಿದೆ ಎಂದು ಹೇಳಿದರು.