ಮಕ್ಕಳ ಮೇಲಿನ ಅತ್ಯಾಚಾರ ದಾಖಲಾತಿ ಪ್ರಮಾಣ ಶೇ.96ರಷ್ಟು ಹೆಚ್ಚಳ

Prasthutha|

ನವದೆಹಲಿ: ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗುವ ಪ್ರಮಾಣವು 2016ರಿಂದ 2022ರ ನಡುವಿನ ಅವಧಿಯಲ್ಲಿ ಶೇ 96ರಷ್ಟು ಹೆಚ್ಚಳವಾಗಿದೆ ಎಂದು ‘ಚೈಲ್ಡ್ ರೈಟ್ಸ್‌ ಆಯಂಡ್‌ ಯೂ’ (ಸಿಆರ್‌ವೈ) ಸ್ವಯಂ ಸೇವಾ ಸಂಸ್ಥೆಯ ವರದಿ ಹೇಳಿದೆ.

- Advertisement -

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ)ದ ದತ್ತಾಂಶಗಳನ್ನು ಆಧಾರವಾಗಿ ತೆಗೆದುಕೊಂಡು ಸಿಆರ್‌ವೈ ಈ ವರದಿ ನೀಡಿದೆ.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿರುವ ಕಾರಣ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಾಗ ದೂರು ದಾಖಲಾತಿಯ ಪ್ರಮಾಣ ಹೆಚ್ಚಿದೆ ಎಂದು ಸಿಆರ್‌ವೈನ ಸಂಶೋಧನಾಂಶ ವಿಭಾಗದ ನಿರ್ದೇಶಕ ಶುಭೇಂದು ಭಟ್ಟಾಚಾರ್ಜಿ ಅಭಿಪ್ರಾಯಪಟ್ಟಿದ್ದಾರೆ.

- Advertisement -

ಈಚೆಗೆ ಆಗಿರುವ ಕಾನೂನು ಸುಧಾರಣೆಗಳು ಮತ್ತು ನೀತಿಗಳ ಬದಲಾವಣೆ ಕೂಡ ಪ್ರಕರಣಗಳು ದಾಖಲಾಗಲು ಕಾರಣವಾಗಿದೆ ಎಂದೂ ಭಟ್ಟಾಚಾರ್ಜಿ ಹೇಳಿದ್ದಾರೆ.

ಉನ್ನತ ಮಟ್ಟದ ಪ್ರಕರಣಗಳಲ್ಲಿ ಸಮುದಾಯಗಳು ಮತ್ತು ಸಂಘಟನೆಗಳ ಸಹಕಾರ, ಮಾಧ್ಯಮಗಳು ನಿರ್ವಹಿಸುವ ಪಾತ್ರವೂ ಹಿರಿದಾಗಿದೆ ಎಂದೂ ಅವರು ಹೇಳಿದ್ದಾರೆ.

7 ವರ್ಷಗಳಲ್ಲಿ ದಾಖಲಾಗಿರುವ ಪ್ರಕರಣಗಳು:

2016-19,765

2017-27,616

2018-30,917

2019-31,132

2020-30,705

2021-36,381

2022-38,911



Join Whatsapp