ಜೀವಂತ ಸಮಾಧಿಯಾದರೆ ಏಸುವನ್ನು ಭೇಟಿಯಾಗಬಹುದು ಎಂದಿದ್ದ ಪಾದ್ರಿ| ಜಮೀನಿನಲ್ಲಿ 90 ಮೃತದೇಹ ಪತ್ತೆ!

Prasthutha|

ನೈರೋಬಿ: ಉಪವಾಸವಿದ್ದು ಜೀವಂತ ಸಮಾಧಿಯಾದರೆ ಸ್ವರ್ಗ ಪ್ರಾಪ್ತಿಯಾಗಿ ಏಸುವನ್ನು ಭೇಟಿಯಾಗಬಹುದು ಎಂದು ಹೇಳಿದ ಪಾದ್ರಿ ಮಾತನ್ನು ನಂಬಿ ಹಲವರು ಜೀವಂತ ಸಮಾಧಿಯಾಗಿರುವ ಘಟನೆ ಕೀನ್ಯಾದಲ್ಲಿ ವರದಿಯಾಗಿದೆ.

- Advertisement -

ಇಲ್ಲಿವರೆಗೆ 90 ಶವಗಳು ಪಾದ್ರಿಯ ಜಮೀನಿನಲ್ಲಿ ಸಿಕ್ಕಿದ್ದು, ಅಲ್ಲಿರುವ ಸ್ಮಶಾನವು ತುಂಬಿ ಹೋಗಿರುವ ಪರಿಣಾಮ ಶವವನ್ನು ಹುಡುಕುವ ಕೆಲಸವನ್ನು ವಿಳಂಬ ಮಾಡಲಾಗುತ್ತಿದೆ. ಮಕ್ಕಳು ಸೇರಿದಂತೆ 90 ಮಂದಿಯ ಶವ ಈಗಾಗಲೇ ದೊರೆತಿದೆ ಎನ್ನಲಾಗಿದೆ.
ಕಾಣೆಯಾದವರ ಮೃತದೇಹಕ್ಕಾಗಿ ಇನ್ನೂ ಶೋಧ ಕಾರ್ಯ ಮುಂದುವರಿದಿದೆ.

ಶವಾಗಾರಗಳು ತುಂಬಿವೆ, ಸಾವುಗಳು ಹೆಚ್ಚಾಗುತ್ತಿವೆ ಶವ ಪರೀಕ್ಷೆ ಪೂರ್ಣಗೊಳ್ಳಲು ನಾಲ್ಕು ದಿನ ಬೇಕಾಗುತ್ತದೆ. ಆಸ್ಪತ್ರೆಯ ಶವಾಗಾರವು 40 ಶವಗಳ ಸಾಮರ್ಥ್ಯವನ್ನು ಮಾತ್ರ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಘಟನೆ ಬಹಿರಂಗವಾದ ನಂತರ ಪೊಲೀಸರು ಪಾಲ್ ಮೆಕೆಂಜಿ ಎಂಬ ಪಾದ್ರಿಯನ್ನು ಬಂಧಿಸಿದ್ದಾರೆ. ಆತ್ಮಹತ್ಯೆಗೆ ತಾನು ಪ್ರೇರೇಪಿಸಲಿಲ್ಲ ಎಂದು ತನಿಖೆಯ ವೇಳೆ ಪಾದ್ರಿ ಹೇಳಿದ್ದಾನೆ.

ಜನರು ಹಸಿವಿನಿಂದ ಸತ್ತಿರುವ ಬಗ್ಗೆ ಡಿಎನ್‌ಎ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಈ ಹಿಂದೆ ಇಬ್ಬರು ಮಕ್ಕಳ ಸಾವಿಗೆ ಪಾದ್ರಿ ಪಾಲ್ ಮೆಕೆಂಜಿ ಕಾರಣನಾಗಿದ್ದನು . ನಂತರ ಪೋಷಕರ ದೂರಿನ ಮೇರೆಗೆ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.

Join Whatsapp