ಮಂಗಳೂರು: ಪ್ರವಾಸಿಗರ ಗಮನ ಸೆಳೆದಿದ್ದ ಪಿಲಿಕುಳದ 9 ವರ್ಷದ ಹುಲಿ ಸಾವು

Prasthutha|

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದ 9 ವರ್ಷದ ಹುಲಿ ” ಓಲಿವರ್ ” ಸೋಮವಾರ ಬೆಳಿಗ್ಗೆ ಮೃತ ಪಟ್ಟಿದೆ.

- Advertisement -

ಆರೋಗ್ಯವಾಗಿ ಸದೃಢವಾಗಿದ್ದ ಹುಲಿಯು ಮುಂಜಾನೆವರೆಗೆ ಚುರುಕಾಗಿದ್ದು, ಒಮ್ಮಿಂದೊಮ್ಮೆಲೇ ಕುಸಿದು ಬಿದ್ದು ಮೃತ ಪಟ್ಟಿದೆ.

ಹುಲಿಯ ಜೀವ ಉಳಿಸಲು ಮೃಗಾಲಯದ ವೈದ್ಯಾಧಿಕಾರಿಗಳು , ಚಿಕಿತ್ಸೆ ನೀಡಿದರೂ ಫಲಪ್ರದವಾಗಿಲ್ಲ.

- Advertisement -

ಹುಲಿಯು ಪಿಲಿಕುಲದ ‘ವಿಕ್ರಮ’ ಮತ್ತು ‘ಶಾಂಭವಿ’ ಗೆ ಜನಿಸಿದ ಎರಡು ಮರಿಗಳಲ್ಲಿ ಒಂದಾಗಿದೆ.

ಪಿಲಿಕುಳದಲ್ಲಿ ಪ್ರಸ್ತುತ 12 ಹುಲಿಗಳು ಇವೆ . ಮೃತಪಟ್ಟ ಹುಲಿಯ ಅಂಗಾಂಗಗಳ ಮಾದರಿಯನ್ನು ಪರೀಕ್ಷೆಗಾಗಿ IAH & VB ಬೆಂಗಳೂರು ಮತ್ತು ಉತ್ತರ ಪ್ರದೇಶದ IVRI ಗೆ ಕಳುಹಿಸಲಾಗಿದೆ . ಕೊರೊನಾ ಪರೀಕ್ಷೆಗಾಗಿ ಮಾದರಿಯನ್ನು ಭೋಪಾಲದ NIHSAD ಗೆ ಕಳುಹಿಸಲಾಗಿದೆ .  ಮೃಗಾಲಯದಲ್ಲಿ ಅನುಮಾನಸ್ಪದ ಯಾವುದೇ ರೋಗವು ಹರಡದಂತ ರೋಗ ನಿರೋಧಕ ದ್ರಾವಣವನ್ನು ಪ್ರಾಣಿಗಳ ಆವರಣದ ಒಳಗೆ ಮತ್ತು ಸುತ್ತ ಮುತ್ತ ಸಿಂಪಡಿಸಲಾಗುತ್ತಿದೆ  ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್ . ಜೆ . ಭಂಡಾರಿ  ತಿಳಿಸಿದ್ದಾರೆ.

Join Whatsapp