ಇಸ್ರೇಲ್ ದಾಳಿಗೆ 6 ಮಕ್ಕಳು ಸೇರಿದಂತೆ 9 ಮಂದಿ ಮೃತ: 24 ಗಂಟೆಗಳಲ್ಲಿ 37 ಪ್ಯಾಲೆಸ್ತೀನಿಯರ ಸಾವು

Prasthutha|

ಗಾಜಾ: ಗಾಝಾದ ಮನೆಯೊಂದರ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿದ ಪರಿಣಾಮ 6 ಮಕ್ಕಳು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ.

- Advertisement -

ರಫಾದ ಆಸ್ಪತ್ರೆಯೊಂದರ ದಾಖಲೆಗಳ ಪ್ರಕಾರ, 6 ಮಕ್ಕಳು, ಇಬ್ಬರು ಮಹಿಳೆಯರು ಮತ್ತು ಪುರುಷರೊಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಗಾಝಾದ ರಕ್ಷಣಾ ಪಡೆ ತಿಳಿಸಿದೆ.

‘ಕಳೆದ 24 ಗಂಟೆಗಳಲ್ಲಿ ಇಸ್ರೇಲ್‌ ದಾಳಿಯಿಂದಾಗಿ 37 ಮಂದಿ ಮೃತಪಟ್ಟಿದ್ದು, 68 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಗಾಝಾದ ರಕ್ಷಣಾ ಪಡೆ ಇಂದು ತಿಳಿಸಿದೆ.

- Advertisement -

ಇತ್ತೀಚಿನ ಲೆಕ್ಕಾಚಾರದ ಪ್ರಕಾರ ಇಸ್ರೇಲ್‌-ಹಮಾಸ್‌ ಯುದ್ಧದಲ್ಲಿ ಈವರೆಗೆ ಪ್ಯಾಲೆಸ್ಟಿನ್‌ನ 34,049 ಮಂದಿ ಮೃತಪಟ್ಟಿದ್ದು, 76,901 ಮಂದಿ ಗಾಯಗೊಂಡಿದ್ದಾರೆ ‌’ ಎಂದು ಗಾಜಾದ ಆರೋಗ್ಯ ಇಲಾಖೆ ಶನಿವಾರ ತಿಳಿಸಿದೆ.

Join Whatsapp