ದೆಹಲಿ: ದೆಹಲಿ ಹೊರಾವರಣ ಗುರುಗಾಂವ್ ಬಳಿ ಲೈಂಗಿಕ ಕಿರುಕುಳದ ಆರೋಪ ಹೊತ್ತ 88ರ ವೃದ್ಧ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಬುಧವಾರ ಈ ವೃದ್ಧನ ಮೇಲೆ ದೂರು ದಾಖಲಾಗಿತ್ತು. ಮನೆಗೆಲಸದವಳ ಮಗಳು ಅಪ್ರಾಪ್ತ ಬಾಲಕಿಯ ಜೊತೆ ಈ ತಾತ ಕೆಟ್ಟದಾಗಿ ನಡದುಕೊಂಡುದಾಗಿ ದೂರಲಾಗಿದೆ. ಬಾಲಕಿ ಹೇಳುವಂತೆ ಎರಡ್ಮೂರು ಬಾರಿ ಸಹಾಯಕ್ಕೆ ಕರೆದು ಲೈಂಗಿಕ ಕಿರುಕುಳ ನೀಡಿದ್ದ.
ಬುಧವಾರ ದೂರು ದಾಖಲಿಸಿಕೊಂಡ ಗುರು ಗ್ರಾಮದ ಪೋಲೀಸರು ಮನೆಗೆ ಹೋದಾಗ ಆ ಹಿರಿ ಜೀವ ಇರಲಿಲ್ಲ. ಗುರುವಾರ ಆತ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಸತ್ತಿರುವುದು ಗೊತ್ತಾಗಿದೆ. ಯಾವುದೇ ಡೆತ್ ನೋಟ್ ಸಿಕ್ಕಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.
ರಶಿಯಾವು ಉಕ್ರೇನಿನ ಮೇಲೆ ದಾಳಿ ಮಾಡಲು ಕೂಡ ಪಾಶ್ಚಾತ್ಯ ದೇಶಗಳು ಏಶಿಯಾದೊಳಕ್ಕೆ ತಮ್ಮ ಶಸ್ತ್ರಾಸ್ತ್ರ ನೆಲೆ ಕಂಡುಕೊಳ್ಳಲು ನಡೆಸಿದ ಪ್ರಯತ್ನದ ವಿರುದ್ಧವಾಗಿದೆ. ನ್ಯಾಟೋ ಕೂಟಕ್ಕೆ ಉಕ್ರೇನಿನಲ್ಲಿ ನೆಲೆ ಕಂಡುಕೊಳ್ಳುವ ದುಷ್ಟ ಬುದ್ಧಿ ಏಕೆ ಎಂದು ಝಾವೋ ಪ್ರಶ್ನಿಸಿದ್ದಾರೆ.