ರೆಸಾರ್ಟಿನಲ್ಲಿ ಜೂಜಾಟ: ತಹಶೀಲ್ದಾರ್ ,ಇನ್ಸ್ ಪೆಕ್ಟರ್, 13 ಮಹಿಳೆಯರು ಸೇರಿ 84 ಅಧಿಕಾರಿಗಳ ಬಂಧನ

Prasthutha|

ಜೈಪುರ: ಅಕ್ರಮ ಜೂಜಾಟದಲ್ಲಿ ತೊಡಗಿದ್ದ ತಹಶೀಲ್ದಾರ್, ಇನ್ಸ್ ಪೆಕ್ಟರ್, 13 ಮಹಿಳೆಯರು ಸೇರಿದಂತೆ 84 ಮಂದಿ ಅಧಿಕಾರಿಗಳನ್ನು ಜೈಸಿಂಗ್ ಪುರ ಖೋರ್ ಪ್ರದೇಶದ ರೆಸಾರ್ಟ್ ನಿಂದ ಪೊಲೀಸರು ಬಂಧಿಸಿದ್ದಾರೆ.

- Advertisement -

ಜೈಪುರ ಪೊಲೀಸರ ತಂಡವು ಶನಿವಾರ ರಾತ್ರಿ ಆರೋಪಿಗಳು ಜೂಜಾಡುತ್ತಿದ್ದ ಸಾಯಿಪುರ ಬಾಗ್ ಅರಮನೆಯ ಮೇಲೆ ದಾಳಿ ಮಾಡಿ 84 ಮಂದಿಯನ್ನು ಬಂಧಿಸಿದ್ದು, ಬಂಧಿತರಲ್ಲಿ ಕರ್ನಾಟಕ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಬೆಂಗಳೂರಿನಲ್ಲಿ ನಿಯೋಜಿತರಾಗಿರುವ ತಹಶೀಲ್ದಾರ್ ಕೂಡ ಸೇರಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

9 ಹುಕ್ಕಾ, 44 ಐಎಂಎಫ್ಎಲ್ ಬಾಟಲಿಗಳು, 66 ಬಿಯರ್ ಬಾಟಲಿಗಳು, 14 ಐಷಾರಾಮಿ ಕಾರುಗಳು, ಒಂದು ಟ್ರಕ್ ಮತ್ತು 23.78 ಲಕ್ಷ ರೂ.ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜೈಪುರ ಹೆಚ್ಚುವರಿ ಪೊಲೀಸ್ ಆಯುಕ್ತ ಅಜಯ್ಪಾಲ್ ಲಾಂಬಾ ತಿಳಿಸಿದ್ದಾರೆ.

- Advertisement -

ಆರೋಪಿಗಳು ಹರಿಯಾಣ, ಪಂಜಾಬ್, ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp