ಆಸ್ತಿಯಲ್ಲಿ ಪಾಲು ಕೇಳಬಹುದೆಂಬ ಆತಂಕ| ಮರಿಮೊಮ್ಮಗನನ್ನೇ ಹತ್ಯೆಗೈದ ಅಜ್ಜ!

Prasthutha|

ಇಂದೋರ್: ಆಸ್ತಿಯಲ್ಲಿ ಪಾಲು ಕೇಳಬಹುದೆಂಬ ಆತಂಕದಿಂದ ಮರಿಮೊಮ್ಮಗನನ್ನು ಅಜ್ಜನೊಬ್ಬ ಹತ್ಯೆಗೈದ ದಾರುಣ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ.

- Advertisement -

ಮಧ್ಯಪ್ರದೇಶದ ಇಂದೋರ್ ನಲ್ಲಿ ಈ ಘಟನೆ ನಡೆದಿದ್ದು, ಮೃತನನ್ನು 4 ವರ್ಷದ ಶ್ರೇಯಾಂಶ್ ಎಂದು ಗುರುತಿಸಲಾಗಿದೆ.

ಪ್ರಕರಣ ಸಂಬಂಧ ಆರೋಪಿ ಶೋಭರಾಮ್ ಚೌಧರಿ(80)ಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಆಗಾಗ ನಡೆಯುತ್ತಿದ್ದ ಕೌಟುಂಬಿಕ ಕಲಹದ ಕಾರಣ ತಾಯಿ ನೀತು ಜೊತೆ ಶ್ರೇಯಾಂಶ್ ತವರು ಮನೆಯಲ್ಲಿ ನೆಲೆಸಿದ್ದರು. ಆದರೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ನೀತು ಹಾಗೂ ಆಕೆಯ ಪುತ್ರನನ್ನು ಹೊರೆ ಎಂದು ಪರಿಗಣಿಸಿ ತವರು ಮನೆಯಲ್ಲಿ ಪೋಷಕರು ಮಾನಸಿಕ ಕಿರುಕುಳ ನೀಡುತ್ತಿದ್ದರು.

ಮಗು ಬೆಳೆದು ದೊಡ್ಡವನಾದ ಮೇಲೆ ಆಸ್ತಿಯಲ್ಲಿ ಪಾಲು ಕೇಳಬಹುದು, ಮಗುವಿನಿಂದಾಗಿ ಭವಿಷ್ಯದಲ್ಲಿ ಸಮಸ್ಯೆಯಾಗಲು ಸಾಧ್ಯವಿದೆ ಎಂದು ಭಾವಿಸಿ ಮಗುವಿನ ಮುತ್ತಾತ ಶೋಭರಾಮ್ ಕೊಲೆ ಮಾಡಿದ್ದಾನೆ. ಅಂತೆಯೇ ರಾತ್ರಿ ವೇಳೆ ಮರಿಮೊಮ್ಮಗ ತನ್ನ ಜೊತೆ ಮಲಗುತ್ತಿದ್ದ ಅವಕಾಶವನ್ನು ಬಳಸಿಕೊಂಡ ಆರೋಪಿ ಉಸಿರುಗಟ್ಟಿಸಿ ಕೊಂದಿದ್ದಾನೆ.

ಶ್ರೇಯಾಂಸ್ ಕುಟುಂಬಸ್ಥರು ನೀಡಿರುವ ಹೇಳಿಕೆಯನ್ನು ಆಧರಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಿತುಕಾ ವಸಲ್ ತಿಳಿಸಿದ್ದಾರೆ.

Join Whatsapp