ಇಸ್ರೇಲ್’ಗಾಗಿ ಬೇಹುಗಾರಿಕೆ ಆರೋಪ: ಖತರ್ ನಲ್ಲಿ ಮಾಜಿ ಭಾರತೀಯ ನೌಕಾಪಡೆಯ 8 ಅಧಿಕಾರಿಗಳಿಗೆ ಮರಣದಂಡನೆ

Prasthutha|

ಖತರ್: ಇಸ್ರೇಲ್ ಗಾಗಿ ಬೇಹುಗಾರಿಕೆ ನಡೆಸಿದ್ದಾರೆಂಬ ಆರೋಪಗಳನ್ನು ಹೊತ್ತ ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳಿಗೆ ಖತರ್ ಮರಣದಂಡನೆ ವಿಧಿಸಿದೆ.

- Advertisement -


ಭಾರತ ಸರ್ಕಾರವು ಶಿಕ್ಷೆಯ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿದ್ದು, ತನ್ನ ನಾಗರಿಕರನ್ನು ಬಿಡುಗಡೆ ಮಾಡಲು ಲಭ್ಯವಿರುವ ಎಲ್ಲಾ ಕಾನೂನು ಆಯ್ಕೆಗಳನ್ನು ಅನ್ವೇಷಿಸುವುದಾಗಿ ಹೇಳಿದೆ.


ಪ್ರಮುಖ ಭಾರತೀಯ ಯುದ್ಧನೌಕೆಗಳಿಗೆ ಕಮಾಂಡರ್ ಆಗಿರುವ ಅಧಿಕಾರಿಗಳು ಸೇರಿದಂತೆ ಎಂಟು ವ್ಯಕ್ತಿಗಳು ಖತರ್ ನ ಸಶಸ್ತ್ರ ಪಡೆಗಳಿಗೆ ತರಬೇತಿ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುವ ಖಾಸಗಿ ಸಂಸ್ಥೆಯಾದ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸಸ್ ಗಾಗಿ ಕೆಲಸ ಮಾಡುತ್ತಿದ್ದರು. ಅವರ ಜಾಮೀನು ಅರ್ಜಿಗಳನ್ನು ಹಲವಾರು ಬಾರಿ ತಿರಸ್ಕರಿಸಲಾಯಿತು ಮತ್ತು ಅವರ ಬಂಧನವನ್ನು ಖತರ್ ಅಧಿಕಾರಿಗಳು ವಿಸ್ತರಿಸಿದ್ದರು.

- Advertisement -


ಬಂಧಿತರನ್ನು ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ನಾವಿಕ ರಾಗೇಶ್ ಎಂದು ಗುರುತಿಸಲಾಗಿದೆ. ಅವರನ್ನು ದೋಹಾದಲ್ಲಿ ಬಂಧಿಸಲಾಯಿತು.


ಖತರ್ ನ ಸುಧಾರಿತ ಜಲಾಂತರ್ಗಾಮಿ ನೌಕೆಗಳಲ್ಲಿ ಇಸ್ರೇಲ್ ಗಾಗಿ ಬೇಹುಗಾರಿಕೆ ನಡೆಸಿದ ಅಪರಾಧದ ಆರೋಪವನ್ನು ಈ 8 ಮಂದಿಯ ಮೇಲೆ ಹೊರಿಸಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

Join Whatsapp