ಸಹೋದ್ಯೋಗಿ ಕಾನ್ಸ್​​ಟೇಬಲ್ ಪತ್ನಿಯ ಮೇಲೆಯೇ ಸಾಮೂಹಿಕ ಅತ್ಯಾಚಾರ ಮಾಡಿದ 8 ಪೊಲೀಸರು ವಜಾ: ಹೈಕೋರ್ಟ್ ತೀರ್ಪೇನು ಗೊತ್ತಾ?

Prasthutha|

ಬೆಂಗಳೂರು: ಸಹೋದ್ಯೋಗಿ ಕಾನ್ಸ್​​ಟೇಬಲ್ ಪತ್ನಿಯ ಮೇಲೆಯೇ ಸಾಮೂಹಿಕ ಅತ್ಯಾಚಾರವೆಸಗಿ ಬ್ಲಾಕ್ ಮೇಲ್ ಮಾಡಿದ 8 ಪೊಲೀಸರಿಗೆ ಹೈ ಕೋರ್ಟ್ ತಕ್ಕ ಶಾಸ್ತಿ ಮಾಡಿದೆ.

- Advertisement -

7 ವರ್ಷಗಳ ಹಿಂದೆ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಗೆ ಸೇರಿದ 8 ಮಂದಿ ಕಾನ್ಸ್ ಟೇಬಲ್ ಗಳು ಸಹೋದ್ಯೋಗಿ ಕಾನ್ಸ್ ಟೇಬಲ್ ಅವರ ಪತ್ನಿಯ ಮೇಲೆಯೇ ಸಾಮಾಹಿಕ ಅತ್ಯಾಚಾರವೆಸಗಿದ್ದರು. ಮತ್ತು ಬ್ಲಾಕ್ ಮೇಲ್ ಮಾಡಿದ್ದರು. 2015 ರಲ್ಲಿ ಕಾನ್ಸ್ ಟೇಬಲ್ ಪತ್ನಿ ದೂರಿನ ಮೇಲೆ ವಿಚಾರಣೆ ನಡೆದಿದ್ದು, ಪರಿಚಯ ಬೆಳೆಸಿ ಬ್ಲಾಕ್ ಮೇಲ್ ಮಾಡಿ, ಅತ್ಯಾಚಾರವೆಸಗಿದ್ದರು ಎಂದು ಸಾಬೀತಾದ ಹಿನ್ನೆಲೆಯಲ್ಲಿ 8 ಮಂದಿ ಪೊಲೀಸರನ್ನೂ ವಜಾಗೊಳಿಸಿತ್ತು.


ಇಂತಹ ದುಷ್ಕ್ರತ್ಯವು ಸಿಐಎಸ್ ಎಫ್ ನೈತಿಕತೆಗೆ ಒಪ್ಪತಕ್ಕದಲ್ಲ ಮತ್ತು ಕ್ಷಮಾರ್ಹವಲ್ಲ ಎಂದು ಪರಿಗಣಿಸಿದ್ದು ಪತ್ನಿಯರನ್ನು ಬಿಟ್ಟು ತೆರಳುವವರಿಗೆ ಇಂತಹ ಕೃತ್ಯ ಅಭದ್ರತೆಯನ್ನು ಸೃಷ್ಟಿ ಮಾಡುತ್ತದೆ ಎಂದು 8 ಮಂದಿಯ ವಜಾ ಮಾಡಲಾಗಿತ್ತು. ಕೆಲ ದಿನಗಳ ಬಳಿಕ ಕ್ರಿಮಿನಲ್ ಪ್ರಕರಣದಲ್ಲಿ ಎಲ್ಲ ಎಂಟೂ ಮಂದಿ ಖುಲಾಸೆಗೊಂಡಿದ್ದರು.

- Advertisement -

ಆದರೆ ವಜಾ ಆದೇಶ ಪ್ರಶ್ನಿಸಿ, ಹೈಕೋರ್ಟ್​​ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇಂತಹ ಘಟನೆಗಳು ಕಾನ್ಸ್ ಟೇಬಲ್ ಮನೋಸ್ಥೈರ್ಯ ಕುಗ್ಗಿಸುತ್ತವೆ. ಹೀಗಾಗಿ ಇಲಾಖಾ ವಿಚಾರಣೆ ನಡೆಸದೆಯೂ ವಜಾ ಮಾಡಿರುವುದು ಸೂಕ್ತವಾಗಿದೆ ಎಂದು ನ್ಯಾ. ಅಲೋಕ್ ಆರಾಧೆ, ನ್ಯಾ.ಜೆ.ಎಂ. ಖಾಜಿ ಅವರಿದ್ದ ನ್ಯಾಯ ಪೀಠ ತೀರ್ಪು ನೀಡಿದ್ದು ವಜಾವನ್ನು ಎತ್ತಿಹಿಡಿದು 8 ಮಂದಿ ಪೊಲೀಸರಿಗೆ ತಕ್ಕ ಶಾಸ್ತಿ ಮಾಡಿದೆ.

Join Whatsapp