60 ಅಡಿ ಎತ್ತರದ ಉಕ್ಕಿನ ಸೇತುವೆಯನ್ನೇ ಕದ್ದೊಯ್ದ 8 ಮಂದಿಯ ಬಂಧನ

Prasthutha|

ಪಾಟ್ನಾ: ನೀರಾವರಿ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಬಂದು 60 ಅಡಿ ಎತ್ತರದ ಪಾಳುಬಿದ್ದ ಸೇತುವೆಯನ್ನು ಕದ್ದೊಯ್ದು ಪ್ರಕರಣಕ್ಕೆ ಸಂಬಂಧಿಸಿ ಜಲಸಂಪನ್ಮೂಲ ಇಲಾಖೆಯ ಉಪ ವಿಭಾಗಾಧಿಕಾರಿ ರಾಧೆ ಶ್ಯಾಮ್ ಸಿಂಗ್ ಸೇರಿದಂತೆ ಎಂಟು ಮಂದಿಯನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.

- Advertisement -


ಆರೋಪಿಗಳು SDO ಅಧಿಕಾರಿಗಳ ಸಹಾಯದಿಂದ 60 ಅಡಿ ಉದ್ದದ, 500 ಟನ್ ಗಾತ್ರದ ಕಬ್ಬಿಣದ ಸೇತುವೆಯನ್ನು ಕದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳಿಂದ ಒಂದು ಜೆಸಿಬಿ, ಸುಮಾರು 247 ಕಿಲೋಗ್ರಾಂ ತೂಕದ ಕಬ್ಬಿಣದ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ರೋಹ್ಟಾಸ್ ಎಸ್ಪಿ ಆಶಿಶ್ ಭಾರ್ತಿ ತಿಳಿಸಿದ್ದಾರೆ.


ಸಸರಾಮ್ ಜಿಲ್ಲೆಯ ಅರ್ರಾ ಕಾಲುವೆಗೆ ಅಡ್ಡಲಾಗಿ 1972ರಲ್ಲಿ ನಿರ್ಮಿಸಲಾಗಿದ್ದ 60 ಅಡಿ ಎತ್ತರದ ಉಕ್ಕಿನ ಸೇತುವೆಯನ್ನು ಇತ್ತೀಚೆಗೆ ಕಳವುಗೈಯ್ಯಲಾಗಿತ್ತು.

Join Whatsapp