ಬಿಜೆಪಿಯ 8ರಿಂದ 10 ಸಂಸದರು ಚುನಾವಣೆಗೆ ನಿಲ್ಲಲ್ಲ ಎನ್ನುತ್ತಿದ್ದಾರೆ: ಡಿಕೆಶಿ

Prasthutha|

ರಾಮನಗರ: ಬಿಜೆಪಿಯ 8 ರಿಂದ 10 ಮಂದಿ ಸಂಸದರು ಮುಂದಿನ ಬಾರಿಗೆ ಚುನಾವಣೆಗೆ ನಿಲ್ಲುವುದಿಲ್ಲ. ನಮಗೆ ಬಿಜೆಪಿಯಲ್ಲಿ ವಾಯ್ಸ್ ಇಲ್ಲ, ಅವಮಾನ ಆಗಿದೆ ಎನ್ನುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

- Advertisement -


ಮೇಕೆದಾಟು ಬಗ್ಗೆ ಬಿಜೆಪಿ ಸಂಸದರು ಧ್ವನಿ ಎತ್ತುತ್ತಿಲ್ಲ ಎಂಬ ವಿಚಾರ ಕುರಿತು ಮಾತನಾಡಿದ ಅವರು, ಬಿಜೆಪಿ ಸಂಸದರೇ ಚುನಾವಣೆಗೆ ನಿಲ್ಲಲು ಹಿಂದೇಟು ಹಾಕುತ್ತಿದ್ದಾರೆ. ನಮಗೆ ಅವಮಾನ ಆಗಿದೆ, ಹಾಗಾಗಿ ಚುನಾವಣೆಗೆ ನಿಲ್ಲಲ್ಲ ಅಂತಿದ್ದಾರೆ. ಅವರು ಯಾರು ಎಂಬುದನ್ನು ಮುಂದೆ ಹೇಳುತ್ತೇನೆ. ಪಟ್ಟಿಯನ್ನೇ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.


ನಾನು ಮಂಡ್ಯ ಜಿಲ್ಲೆಯ ಪ್ರವಾಸ ಮಾಡುತ್ತಿದ್ದೇನೆ. ಇವತ್ತು ಬೆಳಗ್ಗೆಯೂ ಸಹ ಮೀಟಿಂಗ್ ಮಾಡಿದ್ದೇನೆ. ಕಾವೇರಿ ಹೆಚ್ಚುವರಿ ನೀರನ್ನು ನಾವು ಪಡೆದುಕೊಳ್ಳಬೇಕು. ಇದರಿಂದ ಮಂಡ್ಯ, ಮೈಸೂರು, ಚಾಮರಾಜನಗರ ರೈತರ ನೀರಿನ ಬವಣೆ ತೀರಲಿದೆ. ಸುಮಾರು 400 ಟಿಎಂಸಿ ನೀರು ಸಮುದ್ರದ ಪಾಲಾಗುತ್ತಿದೆ. ಈಗಾಗಲೇ ತಮಿಳುನಾಡಿನವರು ನಮ್ಮ ಅನುಮತಿಯಿಲ್ಲದೇ ಕೆಲ ಪ್ರಾಜೆಕ್ಟ್ಸ್ ಸಿದ್ಧ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರ ಈಗ ಜಾಗರೂಕರಾಗಬೇಕು. ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.

Join Whatsapp