ಮಂಗಳೂರು: ಮೂಡಬಿದ್ರೆ ನಗರದ ಅಲ್ ಫುರ್ಖಾನ್ ವಿದ್ಯಾ ಸಂಸ್ಥೆಯಲ್ಲಿ 78ನೇ ಸ್ವಾತಂತ್ರೋತ್ಸವ ಧ್ವಜಾರೋಹಣ ಕಾರ್ಯಕ್ರಮವನ್ನು ಆಚರಿಸಲಾಯಿತು.
ಮುಖ್ಯ ಅಥಿತಿಯಾಗಿ ಡಾ. ರಿಝಾನ್ ಅಹಮದ್ ವೈದ್ಯಕೀಯ ನಿರ್ದೇಶಕರು City Nursing Home Karkala ಅವರು ಧ್ವಜರೋಹಣವನ್ನು ನೆರೆವೆರಿಸಿದರು.
ಗಣ್ಯರನ್ನು ಶಾಲಾ ವಿದ್ಯಾರ್ಥಿಯಾದ ಅಬ್ದುಲ್ಲಾ ಇವರು ಸ್ವಾಗತಿಸಿದರು. ಡಾ. ರಿಝ್ವಾನ್ ಅಹಮದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತಾನಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಬದುಕನ್ನು ಮುಡಿಪಾಗಿಟ್ಟು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ತ್ಯಾಗವನ್ನು ಮರೆಯಬಾರದು. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಯು ಟಿ ಅಹಮದ್ ಶರೀಫ್, ಖಜಾಂಜಿ ಮೊಹಮ್ಮದ್ ಅಶ್ಫಕ್, ನಿರ್ದೇಶಕಿ ಶ್ರೀಮತಿ ಮುಮಾಝ್, ಆಡಳಿತಾಧಿಕಾರಿ ಮಹಮ್ಮದ್ ಶಹಾಮ್, ವಿವಿಧ ವಿಭಾಗಳ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಭೋದಕ ಸಿಬ್ಬಂದಿ, ಭೋದಕೇತರ ಸಿಬ್ಬಂದಿ ಮತ್ತು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದರು.
ವಿದ್ಯಾರ್ಥಿಗಳಾದ ಶಂಸುದ್ದೀನ್ ಮತ್ತು ಹಸನ್ ನಝೀರುಲ್ ಹಖ್ ಕಾರ್ಯಕ್ರಮ ನಿರೂಪಿಸಿದರು.