ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ: ಆ. 5 – 15ರವರೆಗೆ ರಕ್ಷಿತ ಸ್ಮಾರಕ, ತಾಣಗಳಿಗೆ ಉಚಿತ ಪ್ರವೇಶ

Prasthutha|

- Advertisement -

ನವದೆಹಲಿ: ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಭಾರತದ ಪುರಾತತ್ವ ಸಮೀಕ್ಷೆ (Archaeological Survey of India) ಅಧೀನದಲ್ಲಿ ಬರುವ ಎಲ್ಲಾ ರಕ್ಷಿತ ಸ್ಮಾರಕಗಳು ಮತ್ತು ತಾಣಗಳಿಗೆ ಆ 5ರಿಂದ 15ರ ವರೆಗೆ ಉಚಿತ ಪ್ರವೇಶ ನೀಡಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರು ಆದೇಶ ಹೊರಡಿಸಿದ್ದಾರೆ.

- Advertisement -

ಈ ಕುರಿತಾದ ಆದೇಶ ಪ್ರತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತದ ಆಝಾದಿ ಕಾ ಅಮೃತ್ ಮಹೋತ್ಸವ ಹಿನ್ನೆಲೆಯಲ್ಲಿ ದೇಶದಾದ್ಯಂತ ಇರುವ ಎಲ್ಲಾ ಸಂರಕ್ಷಿತ ತಾಣ ಮತ್ತು ಸ್ಮಾರಕಗಳಿಗೆ ಪ್ರವಾಸಿಗರಿಗೆ ಉಚಿತ ಪ್ರವೇಶದ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಈ ಅವಧಿಯಲ್ಲಿ ಯಾವುದೇ ಶುಲ್ಕವಿಲ್ಲದೆ ಉಚಿತಾಗಿ ಈ ತಾಣಗಳಿಗೆ ಪ್ರವೇಶಿಸಬಹುದು.



Join Whatsapp