74ನೇ ಗಣರಾಜ್ಯೋತ್ಸವ : ವಿಭಿನ್ನ ಕಲಾಕೃತಿ ಮೂಲಕ ಶುಭ ಕೋರಿದ ಗೂಗಲ್ ಡೂಡಲ್

Prasthutha|

ನವದೆಹಲಿ: ಭಾರತದ 74ನೇ ಗಣರಾಜ್ಯೋತ್ಸವದ ಅಂಗವಾಗಿ ಗೂಗಲ್ ಸಂಸ್ಥೆ ವಿಶೇಷವಾದ ಡೂಡಲ್ ಪ್ರಕಟಿಸುವ ಮೂಲಕ ಗೌರವ ಸಲ್ಲಿಸಿದೆ.

- Advertisement -


ಗುಜರಾತ್ ಮೂಲದ ಕಲಾವಿದ ಪಾರ್ಥ್ ಕೊಥೇಕರ್ ಅವರು, ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಚಿಸಿದ ಕಾಗದದ ಕಲಾಕೃತಿಯನ್ನು ಗೂಗಲ್ ಹಂಚಿಕೊಂಡಿದೆ.


ಕಲಾಕೃತಿಯಲ್ಲೇನಿದೆ?: ಗೂಗಲ್ ತನ್ನ ಮುಖಪುಟದಲ್ಲಿ ಹಂಚಿಕೊಂಡ ಕಲಾಕೃತಿಯನ್ನು ಕೈಗಳಿಂದ ಕತ್ತರಿಸಿದ ಕಾಗದದಿಂದ ರಚಿಸಲಾಗಿದೆ. ಇದರಲ್ಲಿ ರಾಷ್ಟ್ರಪತಿ ಭವನ, ಇಂಡಿಯಾ ಗೇಟ್, ಸಿಆರ್ಎಫ್ಪಿ ಕವಾಯತು ತಂಡ ಮತ್ತು ಮೋಟಾರ್ಸೈಕಲ್ ಸವಾರರು ಸೇರಿದಂತೆ ಗಣರಾಜ್ಯೋತ್ಸವದ ಪರೇಡ್ನ ಹಲವು ಅಂಶಗಳನ್ನು ಕಾಣಬಹುದು.

- Advertisement -



Join Whatsapp