SDPI ವತಿಯಿಂದ 73ನೇ ಗಣರಾಜ್ಯೋತ್ಸವ: ಗಣರಾಜ್ಯ ಉಳಿಸಲು ಹೋರಾಟಕ್ಕೆ ಕರೆ

Prasthutha|

ಮಂಗಳೂರು: 73ನೇ ಗಣರಾಜ್ಯೋತ್ಸವದ ಅಂಗವಾಗಿ SDPI ದ.ಕ.ಜಿಲ್ಲಾ ಸಮಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವು ಮಂಗಳೂರು ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ನಡೆಯಿತು.
ಎಸ್ ಡಿಪಿಐ ದ.ಕ.ಜಿಲ್ಲಾ ಅಧ್ಯಕ್ಷ ಅಬೂಬಕ್ಕರ್ ಕುಳಾಯಿ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ SDPI ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಮಾತನಾಡಿ, ಪ್ರಜಾಸತ್ತೆಯ ಮೇಲೆ ಮತ್ತು ಸಂವಿಧಾನಾತ್ಮಕ ಗಣರಾಜ್ಯದ ಮೇಲೆ ಪ್ರಸಕ್ತ ದಿನಗಳಲ್ಲಿ ದಾಳಿಗಳು ಹೆಚ್ಚಾಗುತ್ತಿದ್ದು 70 ವರ್ಷಗಳ ನಮ್ಮ ಗಣರಾಜ್ಯ ವ್ಯವಸ್ಥೆ ತೀವ್ರ ಅಪಾಯದಲ್ಲಿದೆ. ಆದ್ದರಿಂದ ಈ ಗಣರಾಜ್ಯದ ದಿನ ಗಣರಾಜ್ಯ ಉಳಿಸಲು ಹೋರಾಟದ ಪಣ ತೊಡುವುದು ಅಗತ್ಯವಾಗಿದೆ ಎಂದರು.
ಗಣರಾಜ್ಯ ಉಳಿಸುವುದು ಎಂದರೆ ಸಂವಿಧಾನಾತ್ಮಕ ಪ್ರಜಾಪ್ರಭುತ್ವ ವ್ಯವಸ್ಥೆ ಜನತೆಗೆ ಕೊಡುವ ಹಕ್ಕುಗಳ ಮೇಲೆ ನಡೆಯುವ ದಾಳಿಗಳ ವಿರುದ್ಧ ಪ್ರತಿರೋಧ ಒಡ್ಡುವ ಮೂಲಕ ಹೋರಾಟ ನಡೆಸುವುದು ಎಂದಾಗಿದೆ. ಅದಕ್ಕೆ ತಯಾರಾಗೋಣ ಎಂದು ಕರೆ ನೀಡಿದರು.
SDPI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಅನ್ವರ್ ಸಾದಾತ್ ಬಜತ್ತೂರು, ದ.ಕ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ SDPI ಮಂಗಳೂರು ದಕ್ಷಿಣ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಕುದ್ರೊಳಿ ಉಪಸ್ಥಿತರಿದ್ದರು.
SDPI ದ.ಕ. ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Join Whatsapp