ಕೊಡಗು: ಶಿವರಸ್ತ್ರ ಧರಿಸಿದ 72 ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಣೆ

Prasthutha|

ಮಡಿಕೇರಿ: ಶಿರವಸ್ತ್ರ ಧರಿಸಿ ಬಂದ 72 ವಿದ್ಯಾರ್ಥಿನಿಯರನ್ನು ಶಾಲಾ ಕಾಲೇಜಿಗೆ ಪ್ರವೇಶ ನಿರಾಕರಿಸಿದ ಘಟನೆ ಕುಶಾಲನಗರದ ನೆಲ್ಯಹುದಿಕೇರಿಯಲ್ಲಿ ನಡೆದಿದೆ.

- Advertisement -

ನೆಲ್ಯಹುದಿಕೇರಿ ಪಬ್ಲಿಕ್ ಶಾಲೆಯ 8, 9 ಮತ್ತು10 ನೆ ತರಗತಿಯ 32 ವಿದ್ಯಾರ್ಥಿನಿಯರು ಹಾಗೂ ನೆಲ್ಯಹುದಿಕೇರಿ ಪದವಿ ಪೂರ್ವ ಕಾಲೇಜಿನ 40 ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಿ ಬಂದಿದ್ದರು, ಆದರೆ ಹೈಕೋರ್ಟಿನ ಮಧ್ಯಂತರ ಆದೇಶ ಇರುವುದರಿಂದ ಶಾಲಾ ಕಾಲೇಜಿನ ಕೊಠಡಿಗೆ ಪ್ರವೇಶ ನಿರಾಕರಿಸಿದರು.

72 ವಿದ್ಯಾರ್ಥಿನಿಯರು ಹೊರಗೆ ವಠಾರದಲ್ಲೇ ಕುಳಿತು ಕಲಿಯುತ್ತಿದ್ದಾರೆ.

Join Whatsapp