ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಸರ್ಕಾರದ ಭಯಾನಕತೆ | ಆಕ್ಸಿಜನ್ ಇಲ್ಲದೆ ಒಂದೇ ದಿನ 70 ಮಂದಿ ಮೃತ್ಯು !

Prasthutha|

►ಇದು ಕೇವಲ ಅಲಿಗಢದಲ್ಲಿ ಮಾತ್ರ ಎಂದ ಪತ್ರಕರ್ತೆ ರಾಣಾ ಅಯ್ಯೂಬ್ !

- Advertisement -

ಅಲಿಗಢ : ದೇಶದಲ್ಲಿ ಕೋವಿಡ್ ಎರಡನೇ ಅಲೆಯು ನಿರಂತರವಾಗಿ ಜನ ಸಾಮಾನ್ಯರ ಪ್ರಾಣ ಹಿಂಡುತ್ತಿದೆ. ಕೇಂದ್ರದಲ್ಲಿ ಆಳುತ್ತಿರುವ ಬಿಜೆಪಿ ಸರ್ಕಾರ ಮಾತ್ರ ಈ ಕುರಿತು ವಾಸ್ತವ ವರದಿಗಳನ್ನು ಬಿತ್ತರಿಸುವ ಮಾಧ್ಯಮಗಳ ಮತ್ತು ಸಾಮಾಜಿಕ ತಾಣಗಳ ಖಾತೆಗಳ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನ ಪಡುತ್ತಿದೆ. ಈ ಮಧ್ಯೆ ದಿಟ್ಟ ಪತ್ರಕರ್ತೆ ಎಂದೇ ಖ್ಯಾತಿ ಪಡೆದಿರುವ ರಾಣಾ ಅಯ್ಯೂಬ್ ಮಾಡಿರುವ ಟ್ವೀಟ್ ಆದಿತ್ಯನಾಥ್ ಆಳುತ್ತಿರುವ ಉತ್ತರ ಪ್ರದೇಶದ ಭಯಾನಕ ಪರಿಸ್ಥಿತಿಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.  ಟ್ವೀಟ್ ನಲ್ಲಿ ರಾಣಾ ಅವರು ತನ್ನ  ಪತ್ರಕರ್ತ ಮಿತ್ರರೊಬ್ಬರ ಮೂಲಕ ಪಡೆದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆ ಪ್ರಕಾರ ಕೇವಲ ಅಲಿಗಢದಲ್ಲಿ ಮಾತ್ರ ಇಂದು ಬರೋಬ್ಬರಿ 70 ಜನರು ಆಕ್ಸಿಜನ್ ಇಲ್ಲದೆ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದು ನಿಜಕ್ಕೂ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರ ನಡೆಸಿದ ಹತ್ಯಾಕಾಂಡವಾಗಿದೆ ಎಂದವರು ಟ್ವೀಟ್ ನಲ್ಲಿ ಬರೆದಿದ್ದಾರೆ.

ಉತ್ತರ ಪ್ರದೇಶದಲ್ಲಿ ಆಕ್ಸಿಜನ್ ಗೆ ಯಾವುದೇ ಕೊರತೆಯಿಲ್ಲ ಎಂದಿದ್ದ ಮುಖ್ಯಮಂತ್ರಿ ಆದಿತ್ಯನಾಥ್ ಯಾನೆ ಅಜಯ್ ಬಿಷ್ಟ್ ಅವರ ಹೇಳಿಕೆಯ ಸತ್ಯಾಸತ್ಯತೆಯ ಕುರಿತೇ ಸಾರ್ವಜನಿಕರಿಗೆ ಇದೀಗ ಸಂಶಯ ಮೂಡಿದೆ. ಅದು ಮಾತ್ರವಲ್ಲ ಆಕ್ಸಿಜನ್ ಇಲ್ಲವೆಂದು ಹೇಳಿದವರ ವಿರುದ್ಧ ಕಠಿಣ ಕಾನೂನು ಕ್ರಮದ ಹಾಗೂ ಆಸ್ತಿ ವಶಪಡಿಸಿಕೊಳ್ಳುವ ಬೆದರಿಕೆಯನ್ನೂ ಒಡ್ಡಿದ್ದರು. ಉತ್ತರ ಪ್ರದೇಶದ ಚಿಂತಾಜನಕ ಪರಿಸ್ಥಿತಿ ಹೊರ ಜಗತ್ತಿಗೆ ತಿಳಿಯದಂತೆ ತಡೆಯುವುದು ಇದರ ಉದ್ದೇಶ ಎಂದು ಹಲವರು ಈ ಕ್ರಮವನ್ನು ಟೀಕಿಸಿದ್ದರು. ಇದೀಗ ರಾಣಾ ಅಯ್ಯೂಬ್ ಅವರ ಟ್ವೀಟ್ ಉತ್ತರ ಪ್ರದೇಶದ ವಾಸ್ತವ ಪರಿಸ್ಥಿತಿಯನ್ನು ತಿಳಿಸಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

Join Whatsapp