ವ್ಯಾನ್’ಗೆ ಲಾರಿ ಡಿಕ್ಕಿ: 7 ಮಹಿಳೆಯರು ಮೃತ್ಯು

Prasthutha|

ಚೆನ್ನೈ: ವ್ಯಾನ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಏಳು ಜನ ಮಹಿಳೆಯರು ಮೃತಪಟ್ಟ ಘಟನೆ ತಮಿಳುನಾಡಿನ ನಟ್ರಂಪಳ್ಳಿ ಬಳಿಯ ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ನಡೆದಿದೆ.

- Advertisement -


ಮೃತರನ್ನು ಮೀನಾ (50), ಡಿ.ದೇವಯಾನಿ (32), ಸೈಟ್ಟು (55), ದೇವಿಕಾ (50), ಸಾವಿತ್ರಿ (42), ಕಲಾವತಿ (50) ಮತ್ತು ಆರ್ ಗೀತಾ (34) ಎಂದು ಗುರುತಿಸಲಾಗಿದೆ. ಇವರೆಲ್ಲರೂ ವೆಲ್ಲೂರಿನ ಪೆರ್ನಂಬುಟ್ಗೆ ಸೇರಿದವರಾಗಿದ್ದಾರೆ. ಇನ್ನೂ ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಮಹಿಳೆಯರು ಪ್ರವಾಸಕ್ಕೆ ತೆರಳಿದ್ದರು. ವಾಪಸ್ ಮನೆಗೆ ಮರಳುತ್ತಿದ್ದಾಗ ಹೆದ್ದಾರಿಯಲ್ಲಿ ವ್ಯಾನ್ ನ ಮುಂಭಾಗದ ಚಕ್ರ ಪಂಕ್ಚರ್ ಆಗಿದೆ. ಈ ವೇಳೆ ಮಹಿಳೆಯರು ರಸ್ತೆ ಬದಿಯ ಸಿಮೆಂಟ್ ಕಟ್ಟೆಯ ಮೇಲೆ ಕುಳಿತಿದ್ದರು. ಮುಂಜಾನೆ 3 ಗಂಟೆ ಸುಮಾರಿಗೆ ಇದೇ ಮಾರ್ಗವಾಗಿ ಬಂದ ಲಾರಿಯೊಂದು ವ್ಯಾನ್ ಗೆ ಡಿಕ್ಕಿಯಾಗಿದೆ ಪರಿಣಾಮ ವ್ಯಾನ್ ಮಹಿಳೆಯರ ಮೇಲೆ ಉರುಳಿದ್ದು ಈ ದುರ್ಘಟನೆ ಸಂಭವಿಸಿದೆ.

Join Whatsapp