ತಾಯಿ ಗರ್ಭದಲ್ಲೇ ಕಲ್ಲಾಗಿ ಬದಲಾದ 7 ತಿಂಗಳ ಮಗು!

Prasthutha|

►ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸಿದ ಪ್ರಕರಣ!

- Advertisement -

ನ್ಯೂಯಾರ್ಕ್: ತಾಯಿ ಗರ್ಭದಲ್ಲೇ 7 ತಿಂಗಳ ಮಗು ಕಲ್ಲಾಗಿ ಬದಲಾಗಿದ್ದು, ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸಿದೆ.


ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ 73 ವರ್ಷದ ವೃದ್ಧ ಮಹಿಳೆಯೊಬ್ಬರು ಆಸ್ಪತ್ರೆಗೆ ಹೋದಾಗ ತನ್ನ ಗರ್ಭದಲ್ಲಿ ಸುಮಾರು 2 ಕೆಜಿ ತೂಕದ ಕಲ್ಲಿನ ಮಗು ಪತ್ತೆಯಾಗಿದೆ. ಆ ದೃಶ್ಯ ನೋಡಿ ವೈದ್ಯರೇ ಬೆಚ್ಚಿಬಿದ್ದ ಘಟನೆ ಅಕ್ಟೋರಿಯಾದಲ್ಲಿ ನಡೆದಿದೆ.

- Advertisement -

ಮಗು ತಾಯಿಯ ಗರ್ಭದಲ್ಲೇ ಕಲ್ಲಾಗಿ, 35 ವರ್ಷದಿಂದ ಹೊಟ್ಟೆಯಲ್ಲೇ ಇದೆ. ಈ ಬಗ್ಗೆ ಆ ಮಹಿಳೆಗೂ ಗೊತ್ತಿರಲಿಲ್ಲ. ಮಹಿಳೆಗೆ ಸುಮಾರು 35 ವರ್ಷಗಳಿಂದ ಪದೇ ಪದ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಲೇ ಇತ್ತು. ನಂತರ ಎಕ್ಸ್ ರೇ ಮಾಡಿದ ವೈದ್ಯರಿಗೆ ವೃದ್ಧೆಯ ಹೊಟ್ಟೆಯಲ್ಲಿ ಬೃಹತ್ ಗಾತ್ರದ ಕಲ್ಲು ಪತ್ತೆಯಾಗಿದೆ.


35 ವರ್ಷಗಳ ಹಿಂದೆ ಗರ್ಭಿಣಿಯಾಗಿದ್ದ ವೃದ್ಧೆಯ ಹೊಟ್ಟೆಯಲ್ಲಿ 7 ತಿಂಗಳ ಮಗು ನಿಧಾನವಾಗಿ ಕಲ್ಲಾಗಿ ಪರಿವರ್ತನೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Join Whatsapp