ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 7 ಚಿರತೆ ಮರಿಗಳು ಮಾರಕ ವೈರಸ್‌‌ನಿಂದ ಮೃತ್ಯು

Prasthutha|

ಆನೇಕಲ್: ಮಾರಕ ವೈರಸ್‌ಗೆ 7 ಚಿರತೆ ಮರಿಗಳು ಸಾವನ್ನಪ್ಪಿರುವ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನಡೆದಿದೆ. ಪೆಲಿನ್ ಪ್ಯಾನ್ಲೂಕೋಪೇನಿಯಾ ಎಂಬ ಮಾರಕ ವೈರಸ್‌ಗೆ ಚಿರತೆ ಮರಿಗಳು ಬಲಿಯಾಗಿವೆ ಎನ್ನಲಾಗಿದೆ.

- Advertisement -

ಬೆಕ್ಕಿನಿಂದ ಹರಡುವ‌ ಮಾರಕ ರೋಗ ಇದು. ಮೊದಲಿಗೆ ಆಗಸ್ಟ್ 22 ರಂದು ಕಾಣಿಸಿಕೊಂಡಿತ್ತು. ಆಗಸ್ಟ್ 22 ರಿಂದ ಸೆಪ್ಟೆಂಬರ್ 5ರ ಅವಧಿಯಲ್ಲಿ 7 ಚಿರತೆಗಳ ಸಾವು ಕಂಡಿವೆ. ಮನೆಯಲ್ಲಿ ಬೆಕ್ಕು ಸಾಕಿದ್ದ ಅನಿಮಲ್ ಕೀಪರ್‌ನಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ರಾಜ್ಯದ ನಾನಾ ಭಾಗಗಳಿಂದ ರೈತರ ಜಮೀನುಗಳ ಬಳಿ ಸಿಕ್ಕಿದ್ದ ಚಿರತೆ ಮರಿಗಳು ಇವಾಗಿದ್ದವು. ಚಿರತೆ ಮರಿಗಳನ್ನು ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತರಲಾಗಿತ್ತು. ಮಾರಕ ರೋಗಕ್ಕೆ ತುತ್ತಾಗಿ ಈಗ ಏಳು ಚಿರತೆ ಮರಿಗಳು ಮೃತಪಟ್ಟಿವೆ.

- Advertisement -

ಒಂದು ವರ್ಷದವರೆಗೆ ಮರಿಗಳಿಗೆ ಯಾವುದೇ ವ್ಯಾಕ್ಸಿನೇಷನ್ ನೀಡುವಂತಿಲ್ಲ. 11 ಜನರ ಕಮಿಟಿ‌ ಮಾಡಿ ಬೂಸ್ಟರ್ ಡೋಸ್ ನೀಡಿ ಕಂಟ್ರೋಲ್‌ ಮಾಡಲು ಕ್ರಮ ವಹಿಸಲಾಗಿತ್ತು. ಸೋಂಕು ತಗುಲಿದ ಬಳಿಕ ಜೀರ್ಣ ಕ್ರಿಯೆ ಆಗದೇ ರಕ್ತ ವಾಂತಿಯಾಗಿ ಮರಿಗಳು ಪ್ರಾಣ ಬಿಟ್ಟಿವೆ.

ಚಿರತೆ, ಹುಲಿ, ಸಿಂಹ ಸೇರಿದಂತೆ ಎಲ್ಲಾ ಕೇಜ್‌ಗಳಿಗೆ ಬರ್ನಿಂಗ್ ಮಾಡಿ ಜಾಗೃತಿ ವಹಿಸಲಾಗಿದೆ. ಬ್ಲೀಚಿಂಗ್ ಪೌಡರ್, ಔಷಧಿ ಸಿಂಪಡಣೆ ಮಾಡಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ವೈರಾಣು ನಿಯಂತ್ರಣಕ್ಕಾಗಿ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಿದ್ದಾರೆ.

Join Whatsapp