ಧಾರವಾಡದಲ್ಲಿ ಭೀಕರ ರಸ್ತೆ ಅಪಘಾತ: 7 ಮಂದಿ ಸಾವು

Prasthutha|

ಧಾರವಾಡ: ಟೆಂಪೋ ಟ್ರಾಕ್ಸ್ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ 7 ಮಂದಿ ಮೃತಪಟ್ಟಿದ್ದು, 13 ಮಂದಿಗೆ ಗಾಯಗಳಾಗಿರುವ ಘಟನೆ ಧಾರವಾಡದ ಬಾಡ ಕ್ರಾಸ್ ಬಳಿ ನಡೆದಿದೆ.

- Advertisement -

ಅನನ್ಯಾ (14), ಹರೀಶ್ (13), ಶಿಲ್ಪಾ (34), ನಿಲವ್ವ (60), ಮಧುಶ್ರೀ (20), ಮಹೇಶ್ವರ (11), ಶಂಭುಲಿಂಗಯ್ಯ (35) ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿದೆ.

- Advertisement -

ಅವರು ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ ರಾತ್ರಿ 2ರ ಸುಮಾರಿಗೆ ಬೆನಕನಕಟ್ಟಿಗೆ ಮರಳುತ್ತಿದ್ದರು ಎಂದು ತಿಳಿದುಬಂದಿದೆ. 

ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp