ರಾಜಸ್ಥಾನ ಕಾಂಗ್ರೆಸ್‌ನಿಂದ 7 ಗ್ಯಾರಂಟಿ: ಕರ್ನಾಟಕ ಮಾದರಿ ಎಲ್ಲ ಗ್ಯಾರಂಟಿ ಜಾರಿ: ಗೆಹ್ಲೋಟ್‌ ಘೋಷಣೆ

Prasthutha|

- Advertisement -

ಜೈಪುರ: ರಾಜಸ್ಥಾನ ಚುನಾವಣೆಗೆ ಇನ್ನು ಕೇವಲ ಒಂದು ತಿಂಗಳು ಬಾಕಿ ಇದೆ. ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಕಾಂಗ್ರೆಸ್‌ ಪಕ್ಷವನ್ನು ಮರಳಿ ತರಲು ಗ್ಯಾರಂಟಿಗಳ ಮೊರೆ ಹೋಗಿದ್ದಾರೆ. ಪಕ್ಷನ್ನು ಮರಳಿ ಅಧಿಕಾರಕ್ಕೆ ತಂದರೆ ಜನರಿಗೆ 7 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಈ ಪೈಕಿ 2 ಗ್ಯಾರಂಟಿಗಳು 3 ದಿನದ ಹಿಂದೆ ಘೋಷಣೆ ಆಗಿದ್ದರೆ, ಇನ್ನು 5 ಗ್ಯಾರಂಟಿಗಳು ಹೊಸ ಘೋಷಣೆಗಳಾಗಿವೆ. ಅಧಿಕಾರಕ್ಕೆ ಬಂದರೆ ಕರ್ನಾಟಕ ಮಾದರಿ ಎಲ್ಲ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಗೆಹ್ಲೋಟ್‌ ಘೋಷಣೆ ಮಾಡಿದ್ದಾರೆ.

7 ಗ್ಯಾರಂಟಿಗಳು

  1. 1.ಕುಟುಂಬದ ಯಜಮಾನಿಗೆ ವಾರ್ಷಿಕ 10,000 ರೂ.
  2. 2. ಹಸು ಸಗಣಿ ಕೆಜಿಗೆ 2 ರೂ.ನಂತೆ ಸರ್ಕಾರದಿಂದ ಖರೀದಿ. ಈ ಸಗಣಿ ಮೂಲಕ ಸಾವಯವ ಗೊಬ್ಬರ ಹಾಗೂ ವಿವಿಧ ಉತ್ಪನ್ನಗಳ ತಯಾರಿಕೆ
  3. 3. ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ ಅಥವಾ ಲ್ಯಾಪ್‌ಟಾಪ್‌ ವಿತರಣೆ
  4. 4.ಪ್ರವಾಹದಂಥ ನೈಸರ್ಗಿಕ ವಿಪತ್ತಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ 15 ಲಕ್ಷ ರೂ.ವರೆಗೂ ಉಚಿತ ವಿಮೆ
  5. 5. ಎಲ್ಲ ವಿದ್ಯಾರ್ಥಿಗಳಿಗೂ ಆಂಗ್ಲ ಮಾಧ್ಯಮ ಶಿಕ್ಷಣ ಸೌಲಭ್ಯ, ಈ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ
  6. 6.ರಾಜ್ಯದ 1 ಕೋಟಿ ಕುಟುಂಬಗಳಿಗೆ 500 ರೂ.ಗೆ ಸಬ್ಸಿಡಿ ದರದಲ್ಲಿ ಗ್ಯಾಸ್‌ ಸಿಲಿಂಡರ್‌
  7. 7. ಹಳೆ ಪಿಂಚಣಿ ಪದ್ಧತಿ ಜಾರಿ, ಈ ಮೂಲಕ ಪಿಂಚಣಿಯಿಂದ ವಂಚಿತರಾದವರಿಗೆ ಪೆನ್ಷನ್‌


Join Whatsapp