ಮಂಗಳೂರು: ಇತ್ತೀಚೆಗೆ ಮೂಡುಶೆಡ್ಡೆಯಲ್ಲಿ ಬಜರಂಗದಳದ ಕಾರ್ಯಕರ್ತರು ಅಶ್ಪಾಕ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿ ದುಷ್ಕ್ರತ್ಯ ಮೆರೆದೆ ಪ್ರಕರಣದ ಆರೋಪಿ ಬಜರಂಗದಳದ ವಿವೇಕಾನಂದ ಎಂಆತನನ್ನು ಬೆದರಿಸಿದ ಆರೋಪದ ಮೇಲೆ 7 ಮಂದಿಯ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ನಾಯಕ ಮಿಥುನ್ ರೈ ಪರ ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿದ ನೆಪದಲ್ಲಿ ಬಜರಂಗದಳದ ಗೂಂಡಾಪಡೆ ಅಶ್ಫಾಕ್ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿತ್ತು.
ಈ ಪ್ರಕರಣದ ಅರೋಪಿಗಳಲ್ಲಿ ಒಬ್ಬನಾದ ಹಿಂದುತ್ವ ನಾಯಕ ವಿವೇಕಾನಂದ ಎಂಬವನನ್ನು ಸಂತ್ರಸ್ತ ಅಶ್ಫಾಕ್ ಗೆ ಹಲ್ಲೆ ನಡೆಸಿರುವ ಕುರಿತು ಯುವಕರ ತಂಡವೊಂದು ಪ್ರಶ್ನಿಸಿ ಹಲ್ಲೆ ನಡೆಸಲು ಮುಂದಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವೇಕಾನಂದ ಅವರು ಕಾವೂರು ಠಾಣೆಯಲ್ಲಿ ಯುವಕರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ. ಈ ನಿಟ್ಟಿನಲ್ಲಿ ಕಾವೂರು ಠಾಣೆಯ ಅಧಿಕಾರಿಗಳು 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಐದು ಮಂದಿಯನ್ನು ಬಂಧಿಸಿದ್ದಾರೆ.
ಬಜರಂಗದಳದ ಪುಂಡರ ಪಡೆ ಜಿಲ್ಲೆಯಲ್ಲಿ ಆಗಾಗ ಅನೈತಿಕ ಪೊಲೀಸ್ ಗಿರಿ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದೆ. ದುಷ್ಕರ್ಮಿಗಳಿಗೆ ಜಿಲ್ಲೆಯ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಈ ರೀತಿ ಘಟನೆ ಪುನರಾವರ್ತನೆ ಆಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ : ಮಂಗಳೂರು : ಬಜರಂಗದಳದಿಂದ ಮುಸ್ಲಿಮ್ ಯುವಕನ ಮೇಲೆ ಮಾರಣಾಂತಿಕ ಹಲ್ಲೆ !