ಅಯೋಧ್ಯೆ | ಮಸೀದಿಗೆ ಹಂದಿಮಾಂಸ ಎಸೆದು ಕುರ್ ಆನ್ ಹರಿದ 7 ಸಂಘಪರಿವಾರದ ಕಾರ್ಯಕರ್ತರ ಬಂಧನ

Prasthutha|

ಆಯೋಧ್ಯೆ: ಬುಧವಾರ ಇಲ್ಲಿನ ಮೂರು ಮಸೀದಿಗಳು, ದರ್ಗಾದ ಹೊರಗಡೆ ಹಂದಿಮಾಂಸ ಎಸೆದು, ಮುಸ್ಲಿಮ್ ವಿರೋಧಿ ಪೋಸ್ಟರ್ ರಚಿಸಿ, ಕುರ್ ಆನ್ ಪುಟಗಳನ್ನು ಹರಿದ ಘಟನೆಗೆ ಸಂಬಂಧಿಸಿದಂತೆ ಏಳು ಮಂದಿ ಸಂಘಪರಿವಾರದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಬಂಧಿತರನ್ನು ಅಯೋಧ್ಯೆ ನಿವಾಸಿಗಳಾದ ಮಹೇಶ್ ಕುಮಾರ್ ಮಿಶ್ರಾ, ಪ್ರತ್ಯೂಷ್ ಶ್ರೀವಾಸ್ತವ, ನಿತಿನ್ ಕುಮಾರ್, ದೀಪಕ್ ಕುಮಾರ್ ಗೌರ್ ಅಲಿಯಾಸ್ ಗುಂಜನ್, ಬ್ರಿಜೇಶ್ ಪಾಂಡೆ, ಶತ್ರುಘ್ನ ಪ್ರಜಾಪತಿ ಮತ್ತು ವಿಮಲ್ ಪಾಂಡೆ ಎಂದು ಗುರುತಿಸಲಾಗಿದೆ.

ಈ ಮಧ್ಯೆ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸುವುದಾಗಿ ಅಯೋಧ್ಯೆ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

- Advertisement -

ಜಿಲ್ಲೆಯಲ್ಲಿ ಗಲಭೆ ಆಯೋಜಿಸಲು ಈ ಕೃತ್ಯ ನಡೆಸಿರುವುದಾಗಿ ವಿಚಾರಣೆಯ ವೇಳೆ ಆರೋಪಿಗಳು ಬಾಯ್ಬಿಟ್ಟುರುವುದಾಗಿ ಅಯೋಧ್ಯೆ ಎಸ್ಪಿ ತಿಳಿಸಿದ್ದಾರೆ.

ಸದ್ಯ ಅಯೋಧ್ಯೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಮತ್ತು ಘಟನೆಯ ಬಳಿಕ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ.

ಮೂರು ಮಸೀದಿಗಳಾದ ತಾತ್ಷಾ ಜಮಾ ಮಸೀದಿ, ಘೋಸಿಯಾನ ಮಸೀದಿ ಮತ್ತು ಕಾಶ್ಮೀರಿ ಮೊಹಲ್ಲಾ ಮಸೀದಿ, ಗುಲಾಬ್ ಶಾ ಬಾಬಾ ದರ್ಗಾದ ಮೇಲೆ ಬುಧವಾರ ಆಕ್ಷೇಪಾರ್ಹ ವಸ್ತುಗಳನ್ನು ಎಸೆಯಲಾಗಿತ್ತು.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 295, 295 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಾಂಡೆ ತಿಳಿಸಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News



Join Whatsapp