ತೈವಾನ್​: 7.5 ತೀವ್ರತೆಯ ಪ್ರಬಲ ಭೂಕಂಪ

Prasthutha|

ತೈವಾನ್‌ ನ ಕರಾವಳಿ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ 7.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಜಧಾನಿ ತೈಪೆಯನ್ನು ನಡುಗಿಸಿದೆ.

- Advertisement -

ಭೂಕಂಪದಿಂದಾಗಿ ನಗರದ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ದಕ್ಷಿಣ ಜಪಾನ್ ಮತ್ತು ಫಿಲಿಪೈನ್ಸ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಪೂರ್ವ ತೈವಾನ್‌ನಲ್ಲಿ ಹಲವಾರು ಕಟ್ಟಡಗಳು ಕುಸಿದಿವೆ, ಸಾವುನೋವುಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ತೈವಾನ್ ಮತ್ತು ಓಕಿನಾವಾ, ಜಪಾನ್ ಮತ್ತು ಫಿಲಿಪೈನ್ಸ್‌ನಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ತೈವಾನ್‌ನಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ತೈವಾನ್ ದೂರದರ್ಶನ ಕೇಂದ್ರಗಳು ಭೂಕಂಪದ ಕೇಂದ್ರದ ಸಮೀಪವಿರುವ ಹುವಾಲಿಯನ್‌ನಲ್ಲಿ ಕೆಲವು ಕುಸಿದ ಕಟ್ಟಡಗಳ ಚಿತ್ರಗಳನ್ನು ತೋರಿಸಿವೆ. ಶಾಂಘೈ ವರೆಗೂ ಭೂಕಂಪನದ ಅನುಭವವಾಗಿದೆ.

- Advertisement -



Join Whatsapp