ನವದೆಹಲಿ: ಸಂಸತ್ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿದಂತೆ 6ನೇ ಆರೋಪಿ ಮಹೇಶ್ ಕುಮಾವತ್ ನ್ನು ಬಂಧನ ಮಾಡಲಾಗಿದೆ.
ರಾಜಸ್ಥಾನದ ನಾಗೌರ್ ಜಿಲ್ಲೆಯ ನಿವಾಸಿಯಾದ ಮಹೇಶ್ ಡಿಸೆಂಬರ್ 13 ರಂದು ದೆಹಲಿಗೆ ಬಂದಾಗ ಇಬ್ಬರು ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯಿಂದ ಲೋಕಸಭಾ ಕೊಠಡಿಗೆ ಹಾರಿ ಹೊಗೆ ಡಬ್ಬಿಗಳಿಗೆ ಬೆಂಕಿ ಹಚ್ಚಿ ರಾಷ್ಟ್ರವ್ಯಾಪಿ ಆಘಾತವನ್ನುಂಟು ಮಾಡಿದ್ದರು.
ಆರಂಭದಲ್ಲಿ ಬಂಧಿತರಾದ ನಾಲ್ವರು ಆರೋಪಿಗಳ ಮೊಬೈಲ್ ಫೋನ್ ಗಳನ್ನು ನಾಶಪಡಿಸುವಲ್ಲಿ ಮಹೇಶ್, ಲಲಿತ್ ಅವರೊಂದಿಗೆ ಸೇರಿಕೊಂಡರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.