ಮಂಗಳೂರು | ಜೂನಿಯರ್ ವಿದ್ಯಾರ್ಥಿಗೆ ರ‍್ಯಾಗಿಂಗ್‌ ನಡೆಸಿದ 6 ನರ್ಸಿಂಗ್ ವಿದ್ಯಾರ್ಥಿಗಳ ಬಂಧನ

Prasthutha|

ಮಂಗಳೂರು: ಜೂನಿಯರ್ ವಿದ್ಯಾರ್ಥಿಯೊರ್ವನ ಮೇಲೆ ರ‍್ಯಾಗಿಂಗ್‌ ನಡೆಸಿದ ಆರೋಪದ ಹಿನ್ನೆಲೆ ನಗರದ ಖಾಸಗಿ ನರ್ಸಿಂಗ್ ಕಾಲೇಜಿನ 6 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಶ್ರೀಲಾಲ್ (20), ಶಾಹಿದ್ (20), ಅಮ್ಜಾದ್ (20), ಜುರೈಜ್ (20), ಹುಸೈನ್ (20) ಮತ್ತು ಲಿಮ್ಸ್ (20) ಎಂದು ಗುರುತಿಸಲಾಗಿದೆ.

- Advertisement -

ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಜು.14 ರ ರಾತ್ರಿ 8 ಗಂಟೆಗೆ ಊಟಕ್ಕೆಂದು ಫಲ್ನೀರ್‌ನ ಫಿಲ್ ಫಿಲ್ ಹೋಟೆಲ್‌ ತೆರಳಿದ್ದಾಗ ಅಲ್ಲಿ ವಿದ್ಯಾರ್ಥಿಯ ಸೀನಿಯರ್ ಗಳಾಗಿದ್ದ ಶ್ರೀಲಾಲ್ , ಜುರೈಜ್, ಹಾಗೂ ರಸೆಲ್ ಇದ್ದು ಈ ವೇಳೆ ಶ್ರೀಲಾಲ್ ” ಜೂನಿಯರ್ ಆದ ನೀವು ಸೀನಿಯರ್ ಆದ ನಮಗೆ ರೆಸ್ಪೆಕ್ಟ್ ಕೊಡಬೇಕೆಂದು” ಎಂದು ಅಸಭ್ಯ ಭಾಷೆ ಬಳಸಿ ಗದರಿಸಿದ್ದಾರೆ. ಇದಾದ ಬಳಿಕ ರಾತ್ರಿ ೧೦.೩೦ ಕ್ಕೆ ವಿದ್ಯಾರ್ಥಿ ಉಳಿದುಕೊಂಡಿದ್ದ ಅತ್ತಾವರದ ಕಿಂಗ್ಸ್ ಕೋರ್ಟ್ ಅಪಾರ್ಟ್ ಮೆಂಟ್ ಮಾರಕಾಯುಧಗಳೊಂದಿಗೆ ಅಕ್ರಮ ಪ್ರವೇಶ ಮಾಡಿ, ಗದರಿಸಿ ಅರೆನಗ್ನಗೊಳಿಸಿ ಅಸಭ್ಯ ಭಾಷೆ ಬಳಸಿ ರ‍್ಯಾಗಿಂಗ್ ಮಾಡಿ ಹಲ್ಲೆ ನಡೆಸಿದ್ದಾರೆ.

ಇದಲ್ಲದೆ ಲಿಮ್ಸ್ ಎಂಬಾತ ಕಾಲೇಜಿನಲ್ಲಿ ನಮ್ಮನ್ನು ಕಂಡ ಕೂಡಲೇ ತಲೆ ಬಗ್ಗಿಸಬೇಕು ಇಲ್ಲವಾದರೆ ಕೊಲೆ ಮಾಡುವುದಾಗಿ ಜೀವಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದಾರೆ. ಐಪಿಸಿಯ 143, 147, 148, 448, 323, 324, 504, 506 ಮತ್ತು ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್ 116 ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.



Join Whatsapp