ಗಾಝಾ: ಪಶ್ಚಿಮ ದಂಡೆಯ ವಿವಿಧ ಕಡೆಗಳಲ್ಲಿ ದಾಳಿ ಮಾಡಿದ ಇಸ್ರೇಲ್ ಸೈನ್ಯ ಕನಿಷ್ಠ ಆರು ಫೆಲೆಸ್ತೀನ್ ನಾಗರಿಕರನ್ನು ಹತ್ಯೆ ಮಾಡಿದೆ. ಈ ಘಟನೆಯಲ್ಲಿ 21 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಸ್ರೇಲ್ ಸೈನಿಕರು ನಬ್ಲುಸ್ ನಗರವನ್ನು ಸುತ್ತುವರಿದಿದ್ದವು ಮತ್ತು ಫೆಲೆಸ್ತೀನ್ ಹೋರಾಟಗಾರರು, ಭ್ರದ್ರತಾ ಪಡೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲ್ ಸೈನಿಕರು ನಡೆಸಿದ ಗುಂಡಿನ ದಾಳಿಗೆ ಐದು ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ. ಈ ಪೈಕಿ ಒಬ್ಬರು ನಿರಾಯುಧರಾಗಿದ್ದರು ಎಂದು ಫೆಲೆಸ್ತೀನ್ ಆರೋಗ್ಯ ಅಧಿಕಾರಿಗಳು ಮತ್ತು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟವರನ್ನು ಅಲಿ ಖಲೀದ್ ಅಂತರ್, ಮಿಶಾಲ್ ಬಾಗ್ದಾದಿ, ವಾಡೆ ಅಲ್ ಹವಾ, ಹಮ್ದಿ ಕಯ್ಯೆಮ್ ಮತ್ತು ಹಮ್ದಿ ಮುಹಮ್ಮದ್ ಶರಾಫ್ ಎಂದು ಗುರುತಿಸಲಾಗಿದೆ.
ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನ್ ಪ್ರಾಧಿಕಾರದ ಪ್ರಧಾನ ಕಚೇರಿಯ ನೆಲೆಯಾಗಿರುವ ರಮಲ್ಲಾಹ್ ನಗರದ ಸಮೀಪವಿರುವ ನಬಿ ಸಲೇಹ್ ಗ್ರಾಮದಲ್ಲಿ ಇಸ್ರೇಲ್ ಪಡೆಗಳೊಂದಿಗಿನ ಘರ್ಷಣೆಯಲ್ಲಿ ಇನ್ನೊಬ್ಬ ಫೆಲೆಸ್ತೀನ್ ಯುವಕ ಕ್ಯುಸೇ ಅಲ್ ತಮಿಮಿ ಎಂಬಾತ ಕೊಲ್ಲಲ್ಪಟ್ಟಿದ್ದಾನೆ ಎಂದು ಸಚಿವಾಲಯ ಮಾಹಿತಿ ನೀಡಿದೆ.