ಕಾರಿಗೆ ಟ್ರಕ್ ಡಿಕ್ಕಿ: 6 ಮಂದಿ ಮೃತ್ಯು

Prasthutha|

ಹರಿಯಾಣ: ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಮೃತಪಟ್ಟಿರುವ ಘಟನೆ ಫರಿದಾಬಾದ್–ಗುರುಗ್ರಾಮ ರಸ್ತೆಯಲ್ಲಿ ನಡೆದಿದೆ.

- Advertisement -


ಪುತಿನ್, ಜತಿನ್, ಆಕಾಶ್, ಸಂದೀಪ್, ಬಲ್ಜೀತ್ ಮತ್ತು ವಿಸಾಲ್ ಮೃತರು ಎಂದು ಗುರುತಿಸಲಾಗಿದೆ.


ಮೃತರೆಲ್ಲರೂ ಪಲವಲ್ ನಗರದವರಾಗಿದ್ದು, ಮಾರುತಿ ಆಲ್ಟೊ ಕಾರಿನಲ್ಲಿ ಗುರುಗ್ರಾಮದಿಂದ ಫರಿದಾಬಾದ್ ಗೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -


ಟ್ರಕ್ ಚಾಲಕ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Join Whatsapp