ಮತ್ತೆ ರೆಸಾರ್ಟ್ ರಾಜಕೀಯಕ್ಕೆ ಮಾರುಹೋದ ಕಾಂಗ್ರೆಸ್
ಮಡ್ಗಾಂವ್: ಪಂಚರಾಜ್ಯ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು, ಕಡಲ ನಗರಿ ಗೋವಾದಲ್ಲಿ ಕಾಂಗ್ರೆಸ್ – ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದೆ. ಕಾಂಗ್ರೆಸ್ 20, ಬಿಜೆಪಿ 15 ಸ್ಥಾನಗಳಿಲ್ಲಿ ಮುನ್ನಡೆ ಪಡೆದಿದೆ.
ಈ ಮಧ್ಯೆ ಕಾಂಗ್ರೆಸ್ ನಲ್ಲಿ ಮತ್ತೆ ರೆಸಾರ್ಟ್ ರಾಜಕೀಯಕ್ಕೆ ಮಾರುಹೋಗಿದ್ದು, ಗೋವಾದ ಅಭ್ಯರ್ಥಿಗಳನ್ನು ತನ್ನಲ್ಲೇ ಉಳಿಸಿಕೊಳ್ಳಲು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನ ಘಟಾನುಘಟಿ ನಾಯಕರು ಗೋವಾದಲ್ಲಿ ಬೀಡುಬಿಟ್ಟಿದ್ದಾರೆ.
ಅಧಿಕಾರಕ್ಕೇರಲು ದಾಪುಗಾಲಿಡುತ್ತಿರುವ ಕಾಂಗ್ರೆಸ್ 20 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 15 ಸ್ಥಾನಗಳನ್ನು ಮುನ್ನಡೆಯನ್ನು ಕಾಯ್ದುಗೊಂಡಿದೆ.