ಅಮೃತಸರ: ಪಂಚರಾಜ್ಯಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ವೇಗ ಪಡೆಯುತ್ತಿದ್ದು, ಪಂಜಾಬ್ ನಲ್ಲಿ ಎಲ್ಲರ ನಿರೀಕ್ಷೆಯನ್ನು ಮೀರಿ ಪ್ರಥಮ ಬಾರಿಗೆ ಆಮ್ ಆದ್ಮಿ ಪಾರ್ಟಿ ಮುನ್ನಡೆ ಸಾಧಿಸಿ ವಿಜಯದತ್ತಾ ದಾಪುಗಾಲು ಇಡುತ್ತಿದೆ.
ರಾಜಕೀಯ ಗುದ್ದಾಟಕ್ಕೆ ಸಾಕ್ಷಿಯಾಗಿದ್ದ ಪಂಜಾಬ್ ನಲ್ಲಿ ಎಲ್ಲಾ ರಾಜ್ಯ ಲೆಕ್ಕಚಾರವನ್ನು ತಲೆಕೆಳಗಾಗಿಸಿ 40 ರಲ್ಲಿ ಮುನ್ನಡೆ ಕಾಯ್ದುಗೊಂಡಿದೆ. ಇದೇ ವೇಳೆ ಕಾಂಗ್ರೆಸ್ 21 ಎರಡನೆ ಸ್ಥಾನದಲ್ಲಿದೆ.
ಒಟ್ಟು 117 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮತ ಎಣಿಕೆ ಪ್ರಾರಂಭವಾಗುತ್ತಿದ್ದಂತೆ ಆಮ್ ಆದ್ಮಿ ಪಾರ್ಟಿ ಮುನ್ನಡೆಯನ್ನು ಪಡೆದುಕೊಂಡಿದೆ.