5, 8ನೇ ತರಗತಿ ಮೌಲ್ಯಾಂಕನ ಪರೀಕ್ಷೆ ವೇಳಾಪಟ್ಟಿ ಪ್ರಕಟ

Prasthutha|

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 5 ಮತ್ತು 8ನೇ ತರಗತಿ ಮೌಲ್ಯಂಕನ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.

- Advertisement -

ಮಾ. 3ರಿಂದ 10ರ ವರೆಗೆ ಮೌಖಿಕ ಪರೀಕ್ಷೆಗಳನ್ನು ಮತ್ತು ಮಾ. 13ರಿಂದ 18ರ ವರೆಗೆ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುವುದು.
ಮಾ. 9ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವುದರಿಂದ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಮೌಲ್ಯಂಕನ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಒಂದೇ ದಿನ ನಡೆಯಬೇಕಾಗಿದೆ. ಆದ್ದರಿಂದ 5 ಮತ್ತು 8ನೇ ತರಗತಿಗಳ ಮೌಲ್ಯಂಕನವನ್ನು ಅಪರಾಹ್ನ 2.30ರಿಂದ 4.30ರ ವರೆಗೆ ನಡೆಸುವಂತೆ ಸೂಚಿಸಲಾಗಿದೆ.

5ನೇ ತರಗತಿ ಪರೀಕ್ಷೆ ವೇಳಾಪಟ್ಟಿ
ಮಾರ್ಚ್ 15 ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು
ಮಾರ್ಚ್ 16 ಗಣಿತ,
ಮಾರ್ಚ್ 17 ಪರಿಸರ ಅಧ್ಯಯನ
ಮಾರ್ಚ್ 18 ದ್ವಿತೀಯ ಭಾಷೆ

- Advertisement -

8ನೇ ತರಗತಿ ವೇಳಾಪಟ್ಟಿ
ಮಾರ್ಚ್ 13 ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್, ಹಿಂದಿ,
ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ
ಮಾರ್ಚ್ 14 ದ್ವಿತೀಯ ಭಾಷೆ -ಇಂಗ್ಲಿಷ್, ಕನ್ನಡ
ಮಾರ್ಚ್ 15 ತೃತೀಯ ಭಾಷೆ -ಹಿಂದಿ, ಕನ್ನಡ, ಇಂಗ್ಲಿಷ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು
ಮಾರ್ಚ್ 16 ಗಣಿತ
ಮಾರ್ಚ್ 17 ವಿಜ್ಞಾನ
ಮಾರ್ಚ್ 18 ಸಮಾಜ ವಿಜ್ಞಾನ

Join Whatsapp