2,000 ರೂ. ನೋಟು ಶೇ. 97ರಷ್ಟು ಆರ್ಬಿಐಗೆ ವಾಪಸ್

Prasthutha|

ನವದೆಹಲಿ: ಮೇ 19, 2023 ರಂದು 2 ಸಾವಿರದ ಪಿಂಕ್ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಳ್ಳಲು ನಿರ್ಧರಿಸಿದಾಗಿನಿಂದ ಆರ್ಬಿಐ, ಅಕ್ಟೋಬರ್ 31ರ ವರೆಗೆ ಶೇ. 97 ರಷ್ಟು ಸ್ವೀಕರಿಸಿದೆ.

- Advertisement -

ಅಕ್ಟೋಬರ್ 31, 2023 ರ ಹೊತ್ತಿಗೆ 10,000 ಕೋಟಿ ರೂ. ಮೌಲ್ಯದ ನೋಟುಗಳು ಬ್ಯಾಂಕಿಗೆ ಹಿಂದಿರುಗದೇ ಬಾಕಿಯಾಗಿವೆ.

ಮೇ.19, 2023 ರ ಹೊತ್ತಿಗೆ 3.56 ಲಕ್ಷ ಕೋಟಿ ಮೌಲ್ಯದ 2 ಸಾವಿರದ ಕರೆನ್ಸಿ ನೋಟುಗಳು ಭಾರತದ ಹಣಕಾಸು ವ್ಯವಸ್ಥೆಯಲ್ಲಿ ಚಲಾವಣೆಯಲ್ಲಿದ್ದವು.

- Advertisement -

ಕೇಂದ್ರ ಬ್ಯಾಂಕ್ ಗುಲಾಬಿ ನೋಟುಗಳನ್ನು ಹಿಂದಿರುಗಿಸುವ ದಿನಾಂಕವನ್ನು ಕಳೆದ ತಿಂಗಳು ಸೆಪ್ಟೆಂಬರ್ 30, 2023 ರಿಂದ ಅಕ್ಟೋಬರ್ 7, 2023 ರವರೆಗೆ ವಿಸ್ತರಿಸಿತ್ತು. ಇನ್ನೂ ಅವಕಾಶವಿದ್ದು, 2,000 ರೂಪಾಯಿ ನೋಟುಗಳನ್ನು ಹೊಂದಿರುವವರು ದೇಶಾದ್ಯಂತ RBI ನ 19 ಕಚೇರಿಗಳಲ್ಲಿ ಅವುಗಳನ್ನು ಹಿಂತಿರುಗಿಸಬಹುದು. ಅವರು ಗರಿಷ್ಠ 20,000 ರೂ. ಮೌಲ್ಯದ ಗುಲಾಬಿ ನೋಟುಗಳನ್ನು ಠೇವಣಿ ಮಾಡಬಹುದು.



Join Whatsapp