ಬಾಗಲಕೋಟೆಯಲ್ಲಿ 500 ಕೆ.ಜಿ. ಸ್ಫೋಟಕ ವಶ: ಇಬ್ಬರು ವಶಕ್ಕೆ

Prasthutha|


ಪೊಲೀಸರ ಕಾರ್ಯಾಚರಣೆಯಿಂದ ತಪ್ಪಿದ ಭಾರೀ ಅನಾಹುತ

- Advertisement -

ಬಾಗಲಕೋಟೆ: ಬಾಗಲಕೋಟೆ ನಗರಕ್ಕೆ ಸಮೀಪವಿರುವ ಹೊನ್ನಾಕಟ್ಟಿ ಗ್ರಾಮದ ತೋಟದ ಮನೆಯೊಂದರಲ್ಲಿ ಸುಮಾರು 500 ಕೆ.ಜಿ.ಯಷ್ಟು ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಪೊಲೀಸರ ಯಶಸ್ವಿ ಕಾರ್ಯಾಚರಣೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.


ಪ್ರಕರಣಕ್ಕೆ ಸಂಬಂಧಿಸಿ ನಾರಾ ಹಾಗೂ ಕಂಕಣಮೇಲಿ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ
ಬಾಗಲಕೋಟೆ ನಗರಕ್ಕೆ ಸಮೀಪವಿರುವ ಹೊನ್ನಾಕಟ್ಟಿ ಗ್ರಾಮದ ಮನೆಯಲ್ಲಿ ಸ್ಫೋಟಕ ಇರಿಸಲಾಗಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದರು.

- Advertisement -


250 ಕೆಜಿ ಸಿದ್ಧ ಸ್ಫೋಟಕ, 250 ಕೆಜಿ ಕಚ್ಚಾ ಪೌಡರ್ ಅನ್ನು ವಶಕ್ಕೆ ಪಡೆದಿರುವ ಬಾಗಲಕೋಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವಿಧ್ವಂಸಕ ಕೃತ್ಯ ನಡೆಸಲು ಸ್ಫೋಟಕ ತಂದಿಡಲಾಗಿತ್ತೇ ಅಥವಾ ಬೇರೆ ಉದ್ದೇಶಕ್ಕೆ ತರಲಾಗಿತ್ತೇ ಎಂಬುದು ಸ್ಪಷ್ಟಗೊಂಡಿಲ್ಲ.



Join Whatsapp