ದಂಡ ಕಟ್ಟುವವರಿಗೆ ಶೇಕಡಾ 50ರಷ್ಟು ರಿಯಾಯಿತಿ ಘೋಷಿಸಿದ ಸಾರಿಗೆ ಇಲಾಖೆ; ಅಂತಿಮ ದಿನಾಂಕ ಇಲ್ಲಿದೆ

Prasthutha|

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟಲು ಬಾಕಿ ಇರುವವರು ಮತ್ತು ಪ್ರಕರಣ ಕೋರ್ಟ್​ನಲ್ಲಿ ಇದ್ದರೆ ಅಂತಹವರಿಗೆ ಸಾರಿಗೆ ಇಲಾಖೆ ಶೇಕಡಾ 50ರಷ್ಟು ರಿಯಾಯಿತಿ ನೀಡಿದೆ.

- Advertisement -

ಫೆಬ್ರವರಿ 11ರ ಒಳಗಾಗಿ ದಂಡ ಕಟ್ಟುವವರಿಗೆ ಶೇಕಡಾ 50ರಷ್ಟು ರಿಯಾಯಿತಿ ನೀಡಿ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಫೆ.11 ರ ಒಳಗಾಗಿ ಫೈನ್ ಕಟ್ಟುವವರು ಕಟ್ಟಬಹುದಾಗಿದೆ. ಫೆಬ್ರವರಿ 11ರ ನಂತರ ಸಂಪೂರ್ಣ ದಂಡದ ಮೊತ್ತ ಪಾವತಿಸಬೇಕು.

- Advertisement -

ಫೆಬ್ರವರಿ 11ರಂದು ಲೋಕ ಅದಾಲತ್ ನಡೆಯಲಿರುವ ಹಿನ್ನಲೆ ದಂಡ ಪಾವತಿಯಲ್ಲಿ ರಿಯಾಯಿತಿ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವೀರಪ್ಪ ಅವರು ಮನವಿ ಮಾಡಿದ್ದರು.



Join Whatsapp