ರೈಲ್ವೇ, ಬ್ಯಾಂಕ್ ಖಾಸಗೀಕರಣದಿಂದ 5 ಲಕ್ಷ ನೌಕರರಿಗೆ ಉದ್ಯೋಗ ನಷ್ಟ: ವರುಣ್ ಗಾಂಧಿ

Prasthutha|

ನವದೆಹಲಿ: ಕೇಂದ್ರ ಸರ್ಕಾರದ ಕೆಲವೊಂದು ಜನವಿರೋಧಿ ನಿಲುವುಗಳನ್ನು ಟೀಕಿಸುತ್ತಲೇ ಬಂದಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಇದೀಗ ರೈಲೈ ಹಾಗೂ ಬ್ಯಾಂಕ್ ಖಾಸಗೀಕರಣದ ವಿರುದ್ಧ ಧ್ವನಿಯೆತ್ತಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ವರುಣ್ ಗಾಂಧಿ, “ಬ್ಯಾಂಕ್‌ಗಳು ಮತ್ತು ರೈಲ್ವೆ ಖಾಸಗೀಕರಣದಿಂದ ಐದು ಲಕ್ಷ ಮಂದಿ ಬಲವಂತವಾಗಿ ನಿವೃತ್ತಿಯಾಗಬೇಕಾಗುತ್ತದೆ. ಅಂದರೆ ಅಷ್ಟೂ ಮಂದಿ ಕೆಲಸ ಕಳೆದುಕೊಂಡಂತೆ’ ಎಂದು ಹೇಳಿದ್ದಾರೆ.

- Advertisement -

ಸಾರ್ವಜನಿಕರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕಾದ ಸರ್ಕಾರ ಸಾಮಾಜಿಕ ಅಸಮಾನತೆ ಸೃಷ್ಟಿಸಿ ಬಂಡವಾಳಶಾಹಿಯನ್ನು ಉತ್ತೇಜಿಸಬಾರದು. ಪ್ರತಿಯೊಂದು ಉದ್ಯೋಗ ನಷ್ಟವೂ ಲಕ್ಷಾಂತರ ಕುಟುಂಬಗಳು ಭರವಸೆಯನ್ನೇ ಕಳೆದುಕೊಳ್ಳುವಂತೆ ಮಾಡಲಿದೆ’ ಎಂದು ಉಲ್ಲೇಖಿಸಿದ್ದಾರೆ.

ಏರಿಕೆಯಾಗುತ್ತಿರುವ ಹಣದುಬ್ಬರ ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣದ ಬಗ್ಗೆ ಕಳೆದ ತಿಂಗಳು ತಮ್ಮ ಲೋಕಸಭಾ ಕ್ಷೇತ್ರ ಫಿಲಿಭಿತ್‌ನಲ್ಲಿ ಪ್ರಸ್ತಾಪಿಸಿದ್ದ ಅವರು, ದೇಶದ ಪ್ರಮುಖ ಸಂಪನ್ಮೂಲಗಳನ್ನು ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.



Join Whatsapp