5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದಕ್ಕೆ 5 ಬಸ್ಕಿಯ ಶಿಕ್ಷೆ: ವೀಡಿಯೋ ವೈರಲ್

Prasthutha|

ಪಟ್ನಾ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಎಲ್ಲರ ಮುಂದೆ ಐದು ಬಸ್ಕಿ ಹೊಡೆಸುವ ಶಿಕ್ಷೆ ನೀಡಿರುವ ವಿಲಕ್ಷಣ ಘಟನೆ ಬಿಹಾರದ ನವಾದಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

- Advertisement -

ಯುವಕ ಬಸ್ಕಿ ಹೊಡೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಗುವಿನ ಮೇಲಿನ ಅತ್ಯಾಚಾರದ ಕೃತ್ಯವನ್ನು ಹಗುರವಾಗಿ ತೆಗೆದುಕೊಂಡಿರುವ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರೋಪಿ ಬಾಲಕಿಗೆ ಚಾಕೋಲೆಟ್ ಆಸೆ ತೋರಿಸಿ, ತನ್ನ ಕೋಳಿ ಫಾರ್ಮ್ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ. ಆತನನ್ನು ಹಿಡಿದು ಗ್ರಾಮದ ಮುಖಂಡರ ಮುಂದೆ ಹಾಜರು ಪಡಿಸಲಾಗಿತ್ತು. ಈ ಸಂದರ್ಭ, ಬಾಲಕಿಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದಕ್ಕೆ ಶಿಕ್ಷೆಯ ರೂಪದಲ್ಲಿ ಐದು ಬಸ್ಕಿಯನ್ನು ಹೊಡೆಸಲಾಗಿದೆ ಎಂದು ವರದಿಯಾಗಿದೆ

- Advertisement -

ಘಟನೆಗೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಎಸ್ ಪಿ ಗೌರವ್ ಮಂಗ್ಲ ತಿಳಿಸಿದ್ದಾರೆ. ಅಲ್ಲದೆ ಅಪರಾಧವನ್ನು ಮರೆಮಾಚಲು ಪ್ರಯತ್ನಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

Join Whatsapp