ಮೈಸೂರು: ಮೈಸೂರಿನ ಏಕಲವ್ಯ ನಗರದ ಅಲೆಮಾರಿ ಜನಾಂಗ ಕಳೆದ 40 ವರ್ಷಗಳಿಂದ ತಾವು ವಾಸವಿರುವ ಸ್ಥಳದ ಹಕ್ಕು ಪತ್ರಗಳನ್ನು ನೀಡುವಂತೆ ಸುಮಾರು 44 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆಗೆ ಕುಳಿತಿದ್ದಾರೆ. ಆದರೆ ಈ ಕ್ರೂರ ವ್ಯವಸ್ಥೆಗೆ ಅವರ ಬೇಡಿಕೆಯನ್ನು ಈಡೇರಿಸುವ ಮನಸ್ಸಿಲ್ಲ. ಸುಳ್ಳು ಭರವಸೆಗಳ ಸರದಾರ ದೇಶದ ಪ್ರಧಾನಿ ನರೇಂದ್ರ ಮೋದಿ 2022ಕ್ಕೆ ಪ್ರತಿಯೊಬ್ಬರಿಗೂ ಪಕ್ಕಾ ಮನೆ, ಮನೆಗೆ ವಿದ್ಯುತ್, ಮನೆಯಲ್ಲಿ ನಲ್ಲಿ, ನಲ್ಲಿಯಲ್ಲಿ ನೀರು ಎಂದು ಪ್ರಾಸಬದ್ಧವಾಗಿ ನೀಡಿದ ಪೊಳ್ಳು ಭರವಸೆಯ ನಿಜರೂಪ ಇದೆ ಎಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.
ಅಲೆಮಾರಿ ಜನಾಂಗದ ಈ ಹೋರಾಟಕ್ಕೆ ತಮ್ಮ ಬೆಂಬಲ ಇದೆ ಎಂದು ತಿಳಿಸಿರುವ ಮಜೀದ್ ಅವರು, ರಾಜ್ಯ ಸರ್ಕಾರ ಈ ವಿಚಾರವಾಗಿ ತಕ್ಷಣ ಮಧ್ಯಪ್ರವೇಶ ಮಾಡಿ ಆ ಅಲೆಮಾರಿ ಜನಾಂಗಕ್ಕೆ ಸಲ್ಲಬೇಕಾದ ಹಕ್ಕು ಪತ್ರಗಳನ್ನು ನೀಡುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.