44 ನೇ ವಯಸ್ಸಿನಲ್ಲಿ SSLC ಪಾಸ್ ಮಾಡಿ ಸಾಧನೆಗೈದ ಮಂಗಳೂರು ವಿವಿ ಕಾಲೇಜಿನ ಗುಮಾಸ್ತೆ ಜಯಶ್ರೀ

Prasthutha|

ಮಂಗಳೂರು: ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬಂತೆ ತಮ್ಮ 44 ನೇ ವಯಸ್ಸಿನಲ್ಲಿ ಎಸ್.ಎಸ್.ಎಲ್.ಸಿ ಪಾಸಾಗಿ ಅಪೂರ್ವ ಸಾಧನೆ ಮಾಡಿರುವ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಗುಮಾಸ್ತರಾಗಿರುವ ಜಯಶ್ರೀ ಅವರನ್ನು ಶುಕ್ರವಾರ ಜಿಲ್ಲೆಯ ಸಹಕಾರಿರಂಗದ ಧುರೀಣರು ಭೇಟಿ ಮಾಡಿ ಆತ್ಮೀಯವಾಗಿ ಸನ್ಮಾನಿಸಿದರು.

- Advertisement -

ವಿಶ್ವಕರ್ಮ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ಮತ್ತು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರಗಳ ಅಧ್ಯಕ್ಷ ಹರೀಶ್ ಆಚಾರ್, ಕರಾವಳಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎ ಎಸ್ ವೆಂಕಟೇಶ್, ಒಡಿಯೂರು ವಿವಿದೋದ್ಧೇಶ ಸಹಕಾರಿ ನಿಯಮಿತದ ಅಧ್ಯಕ್ಷ ಲಯನ್ ಎ ಸುರೇಶ್, ಆತ್ಮಶಕ್ತಿ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ ಅವರು ಜಯಶ್ರೀ ಅವರಿಗೆ ಶಾಲು ಹೊದಿಸಿ, ಫಲಪುಷ್ಪ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿಮಾತನಾಡಿದ ಹರೀಶ್ ಆಚಾರ್, “ತಮ್ಮ44 ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವ ಜಯಶ್ರೀಯವರು ಇತರರಿಗೆ ಮಾದರಿ. ಅವರ ಸಾಧನೆ ಹೆಚ್ಚಿನ ಜನರಿಗೆ ತಲುಪಿ ಅವರಿಗೂ ಪ್ರೇರಣೆಯಾಗಬೇಕು”ಎಂದರು.

ಈ ಸಂದರ್ಭದಲ್ಲಿಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯರೈ, ಮಂಗಳೂರು ವಿಶ್ವವಿದ್ಯಾನಿಲಯದ ರೆಡ್ಕ್ರಾಸ್ ನೋಡಲ್ ಅಧಿಕಾರಿ ಡಾ. ಗಣಪತಿಗೌಡ ಅವರೂ ಉಪಸ್ಥಿತರಿದ್ದರು. ಐದನೇ ತರಗತಿ ಓದಿದ್ದ ಮಂಗಳೂರಿನ ವೆಲೆನ್ಶಿಯಾ ನಿವಾಸಿಯಾಗಿರುವ ಜಯಶ್ರೀ, ಖಾಸಗಿ ಟ್ಯೂಷನ್ ಪಡೆದು ಈ ಬಾರಿ ಎಸ್.ಎಸ್.ಎಲ್.ಸಿ ಪಾಸಾಗಿದ್ದಾರೆ.



Join Whatsapp