ಭೀಕರ ಪ್ರವಾಹಕ್ಕೆ ತತ್ತರಿಸಿದ ಈಶಾನ್ಯ ರಾಜ್ಯ: ಅಸ್ಸಾಮ್’ನಲ್ಲಿ 42 ಬಲಿ; ಸಂಪರ್ಕ ಕಳೆದುಕೊಂಡ ಮೇಘಾಲಯ ಹೆದ್ದಾರಿ

Prasthutha|

ಗುವಾಹಟಿ: ಭೀಕರ ಪ್ರವಾಹ ಮತ್ತು ಭೂಕುಸಿತಕ್ಕೆ ಈಶಾನ್ಯ ರಾಜ್ಯಗಳಾದ ಅಸ್ಸಾಮ್ ಮತ್ತು ಮೇಘಾಲಯ ತತ್ತರಿಸಿದ್ದು, ಉಭಯ ರಾಜ್ಯಗಳಲ್ಲಿ ಕನಿಷ್ಠ 42 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 40 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ನೈಸರ್ಗಿಕ ದುರಂತಕ್ಕೆ ಮೇಘಾಲಯ ರಾಷ್ಟ್ರೀಯ ಹೆದ್ದಾರಿ ಕೊಚ್ಚಿಹೋಗಿದ್ದು, ಸಂಪರ್ಕ ಕಡಿದುಕೊಂಡಿದೆ.

- Advertisement -

ಅಸ್ಸಾಮ್ ರಾಜ್ಯದ 33 ಜಿಲ್ಲೆಗಳ ಪೈಕಿ 32 ಜಿಲ್ಲೆಗಳು ಭೀಕರ ಪ್ರವಾಹಕ್ಕೆ ಸಂಪೂರ್ಣವಾಗಿ ಮುಳುಗಿದ್ದು, ವಿನಾಶಕಾರಿ ಪ್ರವಾಹಕ್ಕೆ ಭಾಗಶಃ ನಲುಗಿದೆ. ಕಳೆದ 24 ಗಂಟೆಗಳಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ.

ಈ ಮಧ್ಯೆ 32 ಜಿಲ್ಲೆಗಳಲ್ಲಿ ಕನಿಷ್ಠ 30 ಲಕ್ಷ ಜನರು ಪ್ರವಾಹಕ್ಕೆ ಸಿಲುಕಿದಾರೆ. ಅಲ್ಲದೆ ಸುಮಾರು 4000 ಕ್ಕೂ ಅಧಿಕ ಹಳ್ಳಿಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐದು ಪ್ರಮುಖ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿದು ಅಸ್ಸಾಮ್’ಗೆ ಹೆಚ್ಚಿನ ಹಾನಿ ಮಾಡಿದೆ.

- Advertisement -

ಇಲ್ಲಿನ ಪರಿಸ್ಥಿತಿ ತುಂಬಾ ಹೀನಾಯವಾಗಿದ್ದು, ನಾವು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದೇವೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಜನರನ್ನು ತಲುಪುವಂತಾಗಲು ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅಸ್ಸಾಮ್’ನ ಜಲಸಂಪನ್ಮೂಲ ಸಚಿವ ಪಿಜುಶ್ ಹಝಾರಿಕಾ ತಿಳಿಸಿದ್ದಾರೆ.

ಈ ವಾರ ಅಸ್ಸಾಮ್’ನಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹಕ್ಕೆ ಸಿಲುಕಿ 24 ಜನರು ಸಾವಪ್ಪಿದ್ದಾರೆ. ಅಲ್ಲದೆ ಕಳೆದ ಏಪ್ರಿಲ್’ನಿಂದ ಒಟ್ಟು 62 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿವೆ.

Join Whatsapp