42 ಕಾಂಗ್ರೆಸ್ ಮುಖಂಡರಿಂದ ಜೆಡಿಎಸ್ ಸೇರ್ಪಡೆ: ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಎಚ್’ಡಿಕೆ

Prasthutha|

ಬಾದಾಮಿ/ಬಾಗಲಕೋಟೆ: ಕೋಲಾರ ಜಿಲ್ಲೆಯ ಮುಳಬಾಗಿಲು ವಿಧಾನಸಭೆ ಕ್ಷೇತ್ರದ 42ಕ್ಕೂ ಹೆಚ್ಚು ಪ್ರಮುಖ ನಾಯಕರು ಇಂದು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

- Advertisement -


ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ರಥಯಾತ್ರೆ ನಡೆಸುತ್ತಿರುವ ವೇಳೆ ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರ ನೇತೃತ್ವದಲ್ಲಿ ಗುಳೇದಗುಡ್ಡಕ್ಕೆ ಆಗಮಿಸಿದ ಎಲ್ಲ ನಾಯಕರು ಪಕ್ಷಕ್ಕೆ ಸೇರಿದರು.


ಮಾಜಿ ಮುಖ್ಯಮಂತ್ರಿ ಅವರು ಎಲ್ಲ ಮುಖಂಡರಿಗೆ ಪಕ್ಷದ ಶಾಲು ಹಾಕಿ, ಬಾವುಟ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು.
ಮುಳಬಾಗಿಲು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೀಶ್,
ಮುಖಂಡರಾದ ಪುಟ್ಟೇಗೌಡ, ಆನಂದ್, ಸಿ.ಗೋಪಿ, ಗಂಗರಾಜು, ಕೆ.ಗೋಪಾಲ್, ರಾಮಚಂದ್ರ, ರೆಡ್ಡಪ್ಪ, ಸುಬ್ರಮಣಿ, ಸುನೀಲ್, ಸಿ ಕೆ ಎನ್ ನಾಗರಾಜು , ರಮೇಶ್, ವಿ ಕೃಷ್ಣಪ್ಪ, ಚಂದ್ರಪ್ಪ, ಚಂದ್ರಶೇಖರ, ಪ್ರಕಾಶ್ ಸೇರಿದಂತೆ 42ಕ್ಕೂ ಹೆಚ್ಚು ನಾಯಕರು ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿ ಜೆಡಿಎಸ್ ಸೇರಿದರು.

- Advertisement -


ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ನಮ್ಮ ಪಕ್ಷಕ್ಕೆ ಬಂದಿರುವ ಎಲ್ಲಾ ನಾಯಕರನ್ನು ಸಂತೋಷದಿಂದ ಬರ ಮಾಡಿಕೊಂಡಿದ್ದೇನೆ. ಸಮೃದ್ಧಿ ಮಂಜುನಾಥ್ ಅವರ ನೇತೃತ್ವದಲ್ಲಿ ಎಲ್ಲರೂ ಪಕ್ಷ ಸಂಘಟನೆ ಮಾಡಲಿ, ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಈ ಬೃಹತ್ ಸೇರ್ಪಡೆಯಿಂದ ಮುಳಬಾಗಿಲು ಸೇರಿ ಕೋಲಾರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷ ಸೇರಿದ ನಂತರ ಮಾತನಾಡಿದ ಮುಳಬಾಗಿಲಿನ ಮುಖಂಡರು, ಕಾಂಗ್ರೆಸ್ ಪಕ್ಷದಲ್ಲಿ ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ಕ್ಷೇತ್ರದಲ್ಲಿ ಆ ಪಕ್ಷಕ್ಕೆ ಗೊತ್ತು ಗುರಿ ಇಲ್ಲದ ಪರಿಸ್ಥಿತಿ ಇದೆ. ಭವಿಷ್ಯ ಇಲ್ಲದ ಪಕ್ಷಕ್ಕೆ ನಾವು ವಿದಾಯ ಹೇಳಿ ಪ್ರಬಲ ನಾಯಕತ್ವದ ಜೆಡಿಎಸ್ ಪಕ್ಷಕ್ಕೆ ಸೇರಿದ್ದೇವೆ ಎಂದು ಹೇಳಿದರು.

Join Whatsapp