40,235 ಕಿ.ಮೀ‌. ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿರುವ ಕ್ಷುದ್ರಗ್ರಹ: ನಾಸಾ ಮಾಹಿತಿ

Prasthutha|

ವಾಷಿಂಗ್ಟನ್: ಬೃಹತ್ ಕ್ಷುದ್ರಗ್ರಹವೊಂದು ಭೂಮಿಯತ್ತ ಭಾರೀ ಬೇಗದಲ್ಲಿ ಚಲಿಸುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಾಸಾ ತಿಳಿಸಿದೆ.

- Advertisement -

2024 ಒಎನ್ ಎಂದು ಈ ಕ್ಷುದ್ರಗ್ರಹವನ್ನು ಹೆಸರಿಸಲಾಗಿದ್ದು, ಇದು 60 ಅಂತಸ್ತಿನ ಕಟ್ಟಡದಷ್ಟು ಅಥವಾ ಸುಮಾರು 2 ಫುಟ್‍ಬಾಲ್ ಮೈದಾನಗಳ ಗಾತ್ರದಷ್ಟು ದೊಡ್ಡದಿದೆ‌. ಗಂಟೆಗೆ 40,235 ಕಿ.ಮೀ‌. ವೇಗದಲ್ಲಿ ಇದು ಭೂಮಿಯತ್ತ ಧಾವಿಸುತ್ತಿದೆ. 2024ರ ಸೆಪ್ಟಂಬರ್ 15ರಂದು ಭೂಮಿಯ ಅತ್ಯಂತ ನಿಕಟದಲ್ಲಿ ಹಾದುಹೋಗಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

2024ರ ಸೆಪ್ಟಂಬರ್ 5ರಂದು ಜಿ.ಬೊರಿಸೋವ್ ಈ ಕ್ಷುದ್ರಗ್ರಹವನ್ನು ಪತ್ತೆ ಹಚ್ಚಿದ್ದಾರೆ‌. ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬರೇಟರಿ ಕ್ಷುದ್ರಗ್ರಹದ ಪಥವನ್ನು ನಿಕಟವಾಗಿ ಗಮನಿಸುತ್ತಿದೆ. ಸೆಪ್ಟಂಬರ್ 15ರಂದು ಭೂಮಿಯ ಸುಮಾರು 6,20,000 ಮೈಲು ಸನಿಹದಲ್ಲಿ ಹಾದುಹೋಗಲಿದೆ. ಭೂಮಿಗೆ ಅಪ್ಪಳಿಸುವ ಸಾಧ್ಯತೆ ಬಹುತೇಕ ಇಲ್ಲ ಎಂದು ನಾಸಾ ಹೇಳಿದೆ.



Join Whatsapp