ಲಖನೌ : ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ, ಸಾರ್ವಜನಿಕರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ವಂಚಿಸುವ ಕಾರ್ಯದಲ್ಲಿ ಬಿಜೆಪಿ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಇದೀಗ ಬಿಜೆಪಿಯ ಬಹುಬೇಡಿಕೆಯ ನಾಯಕ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಆಡಳಿತದಲ್ಲಿ ಶಿಕ್ಷಣ ಸಂಸ್ಥೆಗಳನ್ನೂ ಖಾಸಗೀಕರಣ ಮಾಡಲು ಹೊರಟಿದ್ದಾರೆ. ಸರ್ಕಾರಿ ಸ್ವಾಮ್ಯದಲ್ಲಿರುವ ಇಲ್ಲಿನ 40 ಐಟಿಐಗಳನ್ನು ಖಾಸಗಿ ಸಂಸ್ಥೆಗಳಾಗಿ ಪರಿವರ್ತಿಸಲು ಆದಿತ್ಯನಾಥ್ ಸರಕಾರ ನಿರ್ಧರಿಸಿದೆ. ಇದನ್ನು ಪ್ರತಿಭಟಿಸಿ ಈಗ ಉತ್ತರ ಪ್ರದೇಶಾದ್ಯಂತ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ
ಉತ್ತರ ಪ್ರದೇಶದಲ್ಲಿ ಸುಮಾರು 3,303ಕ್ಕೂ ಹೆಚ್ಚು ಐಟಿಐಗಳಿವೆ . ಅದರಲ್ಲಿ ಈಗಾಗಲೇ 2,931 ಸಂಸ್ಥೆಗಳು ಖಾಸಗಿಯವರ ಕೈಯಲ್ಲೇ ಇವೆ. ಕೇವಲ 303 ಸಂಸ್ಥೆಗಳು ಮಾತ್ರ ಸರಕಾರಿ ಅಧೀನದಲ್ಲಿವೆ.
ಗೋರಖ್ ಪುರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಈಗ ಖಾಸಗೀಕರಣದ ವಿರುದ್ಧದ ಹೋರಾಟದ ಕೇಂದ್ರಬಿಂದುವಾಗಿದೆ. ವಿದ್ಯಾರ್ಥಿಗಳು, ಪೋಷಕರು, ಸಿಬ್ಬಂದಿ ನೇತೃತ್ವದಲ್ಲಿ ಐಟಿಐ ಖಾಸಗೀಕರಣ ಕೈಬಿಡುವಂತೆ ಮೂರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.