ವಿದ್ಯುತ್ ತಗುಲಿ ಒದ್ದಾಡುತ್ತಿದ್ದ ಬಾಲಕನನ್ನು ರಕ್ಷಿಸಿದ ವೃದ್ಧರು

Prasthutha|

ವಾರಾಣಸಿ: ಬನಾರಸ್ ನಗರದಲ್ಲಿ ನಿನ್ನೆ ಬೆಳಗ್ಗೆಯಿಂದಲೇ ಮಳೆ ಸುರಿಯುತ್ತಿರುವುದರಿಂದಾಗಿ ಚರಂಡಿಗಳು ತುಂಬಿ ಹರಿಯುತ್ತಿದೆ. ಈ ಮಧ್ಯೆ 4 ವರ್ಷದ ಮಗುವೊಂದು ವಿದ್ಯುತ್ ಸ್ಪರ್ಶಿಸಿ ಒದ್ದಾಡುತ್ತಿದ್ದಾಗ ವೃದ್ಧರೊಬ್ಬರು ಬಾಲಕನನ್ನು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ.

- Advertisement -

ಚೆಟ್‌ಗಂಜ್ ಪೊಲೀಸ್ ಠಾಣೆಯ ಹಬೀಬ್‌ಪುರ ಪ್ರದೇಶದ ಜಂಜಿರಾ ಶಾ ಬಾಬಾ ಸಮಾಧಿ ಬಳಿ ಈ ಘಟನೆ ನಡೆದಿದೆ. ಮಗುವನ್ನು ರಕ್ಷಿಸಿದ ನಂತರ, ಅವರು ಬಾಲಕನನ್ನು ಕುಟುಂಬದ ಸದಸ್ಯರಿಗೆ ಒಪ್ಪಿಸಿ, ಸಂಬಂಧಪಟ್ಟವರಿಗೆ ಕರೆ ಮಾಡಿ ವಿದ್ಯುತ್ ಸರಬರಾಜನ್ನು ನಿಲ್ಲಿಸಿದ್ದಾರೆ.

ಮಗುವಿಗೆ ವಿದ್ಯುತ್ ಸ್ಪರ್ಶವಾಗಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ನಂತರ ಸ್ಥಳಕ್ಕೆ ತೆರಳಿದ್ದಾರೆ ಎಂದು ಪೊಲೀಸ್ ಠಾಣೆ ಪ್ರಭಾರಿ ಚೇಟ್‌ಗಂಜ್ ತಿಳಿಸಿದ್ದಾರೆ.

- Advertisement -

ಸ್ಥಳೀಯ ಹಿರಿಯರು ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸ್ಥಳೀಯ ನಿವಾಸಿ ಜಿತೇಂದ್ರ ಕುಮಾರ್ ಅವರ ನಾಲ್ಕು ವರ್ಷದ ಮಗ ಕಾರ್ತಿಕ್ ಮಳೆ ನಿಂತ ನಂತರ ನೀರಿನಲ್ಲಿ ಆಟವಾಡುತ್ತಿದ್ದ. ಮನೆಯ ಸಮೀಪದಲ್ಲಿದ್ದ ವಿದ್ಯುತ್ ಕಂಬದಿಂದ ವಿದ್ಯುತ್ ನೀರಿನ ಮೂಲಕ ಪ್ರವಹಿಸಿತ್ತು. ಕಾರ್ತಿಕ್​ಗೆ ವಿದ್ಯುತ್ ತಗುಲಿದ ನಂತರ ಕಿರುಚುತ್ತಾ ಗೋಳಾಡುತ್ತಿದ್ದ. ಅಷ್ಟರಲ್ಲಿ ಆ ದಾರಿಯಲ್ಲಿ ಹೋಗುತ್ತಿದ್ದ ಇಬ್ಬರು ಹಿರಿಯರಲ್ಲಿ ಒಬ್ಬರು ನೆಲದ ಮೇಲೆ ಬಿದ್ದು ಅಳುತ್ತಿದ್ದ ಬಾಲಕನನ್ನು ಎತ್ತಿಕೊಳ್ಳಲು ಪ್ರಯತ್ನಿಸಿದ್ದಾರೆ ಆಗ ಅವರಿಗೆ ವಿದ್ಯುತ್ ತಗುಲಿದೆ. ಬಳಿಕ ಮರದ ಕೋಲಿನ ಸಹಾಯದಿಂದ ಬಾಲಕನನ್ನು ಕಾಪಾಡಿದ್ದಾರೆ.

ಈ ಸಂಪೂರ್ಣ ಘಟನೆಯು ಸಮೀಪದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ, ಈ ಹಿರಿಯರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Join Whatsapp