KSRTC ಮುಡಿಗೆ ಮತ್ತೆ 4 ಪ್ರಶಸ್ತಿಗಳ ಗರಿ

Prasthutha|

ಬೆಂಗಳೂರು: ರಾಜ್ಯದ ಕೆಎಸ್‌ಆರ್‌ಟಿಸಿ ಮುಡಿಗೆ ಮತ್ತೆ 4 ಪ್ರಶಸ್ತಿಗಳ ಗರಿ ಸಿಕ್ಕಿದೆ. ವೀ ಕನೆಕ್ಟ್ ಇಂಡಿಯಾ ಮೀಡಿಯಾ ಆ್ಯಂಡ್ ರಿಸರ್ಚ್ ಸ್ಥಾಪಿಸಿರುವ Asia’s Best Quality ಪ್ರಶಸ್ತಿ ಕೆಎಸ್‌ಆರ್‌ಟಿಸಿಗೆ 4 ವರ್ಗದಲ್ಲಿ ಲಭಿಸಿದೆ.

- Advertisement -

ಬ್ಯ್ರಾಡಿಂಗ್ ಮತ್ತು ಮಾರ್ಕೆಟಿಂಗ್, ಸಾರಿಗೆ ಸುರಕ್ಷತೆ, ಕಾರ್ಮಿಕ ಸ್ನೇಹಿ ಉಪಕ್ರಮಗಳು ಹಾಗೂ ಮಾಹಿತಿ ತಂತ್ರಜ್ಞಾನ ವರ್ಗಗಳಲ್ಲಿ ನಿಗಮವು ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಸೆಪ್ಟೆಂಬರ್ 29 ರಂದು ದೆಹಲಿಯ ವಿಮಾನ ನಿಲ್ದಾಣದಲ್ಲಿನ ರಾಡಿಸನ್ ಬ್ಲೂ ಪ್ಲಾಜಾದಲ್ಲಿ ನಡೆಯಲಿದೆ.

ಸಮಾರಂಭದಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಹಾಗೂ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅತಾವಳೆ ಭಾಗಿಯಾಗಲಿದ್ದಾರೆ.

Join Whatsapp