ಶೆಡ್‌ನಲ್ಲಿ ಮಲಗಿದ್ದಲ್ಲೇ ನಾಲ್ವರು ಅನುಮಾನಾಸ್ಪದ ಸಾವು

Prasthutha|

- Advertisement -

ಚಿಕ್ಕಬಳ್ಳಾಪುರ: ಕೋಳಿಫಾರಂ ಶೆಡ್‌ ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ
ತಾಲೂಕಿನ ದೊಡ್ಡಬೆಳವಂಗಲ ಬಳಿಯ ಹೊಲೆಯರಹಳ್ಳಿ ಬಳಿ ನಡೆದಿದೆ.

ನೇಪಾಳ ಮೂಲದವರಾದ ಕಾಲೇ ಸರೇರಾ (60), ಲಕ್ಷ್ಮಿ ಸರೇರಾ (50), ಉಷಾ ಸರೇರಾ (40) ಹಾಗೂ ಪೂಲ್ ಸರೇರಾ (16) ಮೃತಪಟ್ಟವರು. ಸ್ಮಶಾನ ರಸ್ತೆಯಲ್ಲಿರುವ ಕೋಳಿ ಫಾರಂನಲ್ಲಿ 8 ದಿನಗಳ ಹಿಂದೆಯಷ್ಟೇ ಕೆಸಲ ಅರಸಿ ಕುಟುಂಬ ಸಮೇತ ಇವರು ಬಂದಿದ್ದರು.

- Advertisement -

ರಾತ್ರಿ ಶೆಡ್ ಬಾಗಿಲು ಹಾಕಿಕೊಂಡು ಮಲಗಿದ್ದವರು ಭಾನುವಾರ ಬೆಳಗ್ಗೆ ನೋಡಿದಾಗ ಮಲಗಿದ್ದಂತೆಯೇ ಎಲ್ಲರೂ ಶವವಾಗಿ ಪತ್ತೆಯಾಗಿದ್ದಾರೆ